ಪಾಕ್ ಮೂತಿಗೆ ಮತ್ತೊಮ್ಮೆ ಗುದ್ದಿದ ಭಾರತೀಯ ಸೇನೆ! ಗಡಿ ನಿಯಂತ್ರಣ ರೇಖೆಯ ಪಾಕ್ ಸೇನಾ ಆಡಳಿತಾತ್ಮಕ ಕೇಂದ್ರ ಧ್ವಂಸ! ಪೂಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಇದ್ದ ಕೇಂದ್ರ! ಪಾಕಿಸ್ತಾನ ಶೆಲ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯಿಂದ ದಿಟ್ಟ ಉತ್ತರ! ಒಳನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸೇನೆಯಿಂದ ಭಾರೀ ಪ್ರತಿರೋಧ
ಜಮ್ಮು(ಅ.30): ಮಹತ್ವದ ಬೆಳವಣಿಗೆಯೊಂದರಲ್ಲಿ ಕಣಿವೆ ರಾಜ್ಯದ ಪೂಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ, ಪಾಕಿಸ್ತಾನದ ಸೇನಾ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.
ಅಕ್ಟೋಬರ್ 23 ರಂದು ಪೊಂಚ್ ಹಾಗೂ ಜಾಲ್ಹಾಸ್ ಬಳಿ ಪಾಕಿಸ್ತಾನ ಶೆಲ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಈ ದಾಳಿ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನದಿಂದ ನಿರಂತರವಾಗಿ ಒಳನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಸೇನೆ ಗರಿಷ್ಠ ಪ್ರಮಾಣದಲ್ಲಿ ಪ್ರತಿರೋಧ ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಉರಿ ಮತ್ತು ನಾಗ್ರೋತಾ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ 2016 ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಎರಡು ವರ್ಷದ ನಂತರ ಪಾಕ್ ಮೇಲೆ ನಡೆಸಿರುವ ದೊಡ್ಡಮಟ್ಟದ ದಾಳಿ ಇದಾಗಿದೆ.
