Asianet Suvarna News Asianet Suvarna News

ನಿಮ್ಮವರ ಡೆಡ್ ಬಾಡಿ ತೋಗೊಂಡ್ ಹೋಗ್ರಪ್ಪ: ಭಾರತೀಯ ಸೇನೆ!

ತನ್ನ ಸೈನಿಕರ ಶವವನ್ನೂ ಕೊಂಡೊಯ್ಯದ ನಿರ್ದಯಿ ಪಾಕ್ ಸೇನೆ| ಗಡಿ ನಿಯಂತ್ರಣ ರೇಖೆ ಬಳಿ ಪಾಕ್’ನ BAT ಕಮಾಂಡೋಗಳು ಹತ| ತನ್ನ ಸೈನಿಕರ ಶವ ಕೊಂಡೊಯ್ಯಲು ಬಾರದ ಪಾಕ್ ಸೇನೆ| ಸೈನಿಕರ ಶವ ಕೊಂಡೊಯ್ಯುವಂತೆ ಸಂದೇಶ ರವಾನಿಸಿದ ಭಾರತೀಯ ಸೇನೆ| ಬಿಳಿ ಧ್ವಜದೊಂದಿಗೆ ಬಂದು ಶವ ಕೊಂಡೊಯ್ಯಲು ಸೂಚನೆ|

Indian Army Asks Pak To Take Back Bodies of J&K Intruders
Author
Bengaluru, First Published Aug 4, 2019, 4:44 PM IST
  • Facebook
  • Twitter
  • Whatsapp

ಶ್ರೀನಗರ(ಆ.04): ಪಾಕ್  ಸೇನೆಯ ಜಾಯಮಾನವೇ ಅಷ್ಟು. ತನಗಾಗಿ, ತನ್ನ ದೇಶಕ್ಕಾಗಿ ಪ್ರಾಣತೆತ್ತ ಯೋಧರ ಶವ ಮುಟ್ಟಲೂ ನಾ ಒಲ್ಲೆ ಎನ್ನುವ ಜಾಐಮಾನ ಅದರದ್ದು. ತನ್ನ ಸೈನಿಕರ ಶವಕ್ಕೂ ಅಗೌರವ ನೀಡದ, ಅದನ್ನು ಅನಾಥವಾಗಿ ಬಿಟ್ಟು ಬಿಡುವ ಜಗತ್ತಿನ ಏಕೈಕ ಸೇನೆ ಅಂದರೆ ಅದು ಪಾಕ್ ಸೇನೆ ಮಾತ್ರ.

ಗಡಿಯೊಳಗೆ ನುಸುಳಲು ಯತ್ನಿಸಿದ್ದ ಉಗ್ರರು ಹಾಗೂ ಅವರಿಗೆ ಸಹಾಯ ಮಾಡಲೆತ್ನಿಸಿದ ಪಾಕ್ ಬಾರ್ಡರ್ ಆ್ಯಕ್ಷನ್ ಟೀಂ(BAT)ಕಮಾಂಡೋಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಆದರೆ ತನ್ನ ಕಮಾಂಡೋಗಳ ಶವವನ್ನು ಸ್ವೀಕರಿಸಲು ಇದುವರೆಗೂ ಪಾಕ್ ಸೇನೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಮೃತ ಸೈನಿಕರ ಶವ ಕೊಂಡೊಯ್ಯಲು ಬನ್ನಿ ಎಂದು ಭಾರತೀಯ ಸೇನೆ ಪಾಕ್ ಸೇನೆಗೆ ಸಂದೇಶ ರವಾನಿಸಿದೆ.

 ಬಿಳಿ ಧ್ವಜದೊಂದಿಗೆ ನಿಮ್ಮ ಸೈನಿಕರ ಮೃತದೇಹಳಗಳನ್ನು ತೆಗೆದುಕೊಂಡು ಹೋಗಿ ಎಂದು BATಗೆ ಭಾರತೀಯ ಸೇನೆ ತಿಳಿಸಿದೆ. ಆದರೆ ಭಾರತೀಯ ಸೇನೆಯ ಸಂದೇಶಕ್ಕೆ ಪಾಕ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಿನ್ನೆ ಕರೆನ್ ಸೆಕ್ಟರ್ ಬಳಿ ಗಡಿ ನಿಯಂತ್ರಣ ರೇಖೆ ದಾಟಲೆತ್ನಿಸಿದ್ದ BATನ ಐವರು ಕಮಾಂಡೋಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

Follow Us:
Download App:
  • android
  • ios