ಬ್ಯಾಂಕಾಕ್(ನ.02): ಮೂರು ದಿನಗಳ ಥೈಲ್ಯಾಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಬ್ಯಾಂಕಾಂಕ್ ಡೇಲಿ ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದ್ದಾರೆ. 

ವಿಪತ್ತು ಪ್ರತಿರೋಧಕ ಮೂಲಸೌಕರ್ಯ,  ನೆರೆ ಹೊರೆಯ ಎಲ್ಲ ಮಿತ್ರ ದೇಶಗಳೊಂದಿಗೆ ಸಕ್ರೀಯ ಅಭಿವೃದ್ದಿ ಸಹಭಾಗಿತ್ವದ ಸವಾಲುಗಳು ಹಾಗೂ ಜಾಗತಿಕ ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದದ ಸಮರದಲ್ಲಿ ಅಂತರಾಷ್ಟ್ರೀಯ ಸಹಭಾಗಿತ್ವ ರೂಪಿಸಲು ಭಾರತ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

35ನೇ ಅಸಿಯಾನ್ ಹಾಗೂ ಸಂಬಂಧಿತ ಶೃಂಗಸಭೆಗಳ ಮುನ್ನ, ಏಷ್ಯಾ ಹಾಗೂ ವಿಶ್ವದಲ್ಲಿ ಭಾರತದ ಪಾತ್ರ ಕುರಿತು ತಮ್ಮ ವಿಚಾರಗಳನ್ನು ಮೋದಿ ಹಂಚಿಕೊಂಡಿದ್ದಾರೆ.

'ಹೌಡಿ ಮೋದಿ' ಆಗ್ತಿದ್ದಂಗೇ 'ಸವಸ್ದಿ ಮೋದಿ'ಗೆ ಹೊರಟ ಪ್ರಧಾನಿ!

ವಿಶ್ವಾಸ ಹಾಗೂ ಸಹಕಾರದೊಂದಿಗೆ ಎಲ್ಲರ ಅಭಿವೃದ್ದಿ,  ಇಡೀ ಮನುಕುಲವನ್ನು ಒಳಗೊಂಡ ಸಬ್ ಕಾ ಸಾತ್ ಸಬ್ ಕಾ ವಿಶ್ವಾಸ್ ಭಾರತದ ಮೂಲ ಮಂತ್ರ ಎಂದು ಪ್ರಧಾನಿ ಹೇಳಿದ್ದಾರೆ.

ಭಾರತ  ಪೂರ್ವದತ್ತ ಕ್ರೀಯಾ ಶೀಲ ನೀತಿ ಹಾಗೂ ಕಾರ್ಯತಂತ್ರ ಅನುಸರಿಸುತ್ತಿರುವುದು ನಿರ್ಣಾಯಕ ಅಂಶ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  

10 ಸದಸ್ಯ ದೇಶಗಳ ಅಸಿಯಾನ್‌ನೊಂದಿಗೆ ಭಾರತ ಮೊದಲಿನಿಂದಲೂ ತೊಡಗಿಸಿಕೊಂಡಿದೆ ಎಂದು ಈ ವೇಳೆ ಪ್ರಧಾನಿ ಮೋದಿ ಹೇಳಿದ್ದಾರೆ.