Asianet Suvarna News Asianet Suvarna News

ಪ್ರಗತಿಯ ಸಾಮರ್ಥ್ಯ ಹೊಂದಿರುವ ಭಾರತದ ಆರ್ಥಿಕತೆ

ಭಾರತದ ಜಿಡಿಪಿ ಪ್ರಗತಿಯು 2018 ರಲ್ಲಿ ಶೇ.7.5ರ ಬದಲು ಶೇ.7.3ರ ದರದಲ್ಲಿ ಆಗಬಹುದು ಎಂದು ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ.

India to regain top spot with GDP pegged

ವಾಷಿಂಗ್ಟನ್ (ಜ.11) : ಭಾರತದ ಜಿಡಿಪಿ ಪ್ರಗತಿಯು 2018 ರಲ್ಲಿ ಶೇ.7.5ರ ಬದಲು ಶೇ.7.3ರ ದರದಲ್ಲಿ ಆಗಬಹುದು ಎಂದು ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ.

ಆದರೆ ಇತರ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಸುಧಾರಣೆ ಮತ್ತು ಕಾರ್ಯಕ್ರಮ ಅನುಷ್ಠಾನದ ಮೂಲಕ ಭಾರತದ ಆರ್ಥಿಕತೆಯು ಪ್ರಗತಿ ಹೊಂದುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಅದು ಬಣ್ಣಿಸಿದೆ.

2017ರಲ್ಲಿ ಭಾರತ ಶೇ.6.7ರ ದರದಲ್ಲಿ ಪ್ರಗತಿ ಕಂಡಿತು. ಜಿಎಸ್‌ಟಿ ಹಾಗೂ ನೋಟು ನಿಷೇಧವು ಪ್ರಗತಿಗೆ ಅಡ್ಡಿಯಾಗಿತ್ತು ಎಂದೂ ಮಂಗಳವಾರ ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ 2018 ರ ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಆದರೆ ಮುಂದಿನ ದಶಕದಲ್ಲಿ ಭಾರತದ ಆರ್ಥಿಕ ಪ್ರಗತಿಯು ಇತರ ಅಭಿವೃದ್ಧಿಶೀಲ ದೇಶಗಳಿಗಿಂತ ಏರುಮುಖದಲ್ಲಿ ಸಾಗಲಿದೆ.

ಹೀಗಾಗಿ ಅಲ್ಪಾವಧಿ ಯಲ್ಲಿನ ಲಾಭ-ನಷ್ಟಗಳನ್ನು ನಾವು ನೋಡುವು ದಿಲ್ಲ. ದೀರ್ಘಾವಧಿ ಚಿತ್ರವನ್ನು ಗಮನದಲ್ಲಿ ಇರಿಸಿಕೊಂಡು ಆರ್ಥಿಕ ಮುನ್ನೋಟವನ್ನು ಸಿದ್ಧಪಡಿಸಿದ್ದೇವೆ ಎಂದು ವಿಶ್ವಬ್ಯಾಂಕ್ ಅಭಿವೃದ್ಧಿ ಮುನ್ನೋಟ ಸಮೂಹದ ನಿರ್ದಶಕ ಕೋಸೆ ಹೇಳಿದ್ದಾರೆ.

Follow Us:
Download App:
  • android
  • ios