ಹಿಂದೂಗಳ ಪೂಜ್ಯನೀಯ ಪ್ರಾಣಿ ಎಂದೇ ಕರೆಯುವ ಗೋವಿನ ರಕ್ಷಣೆಯ ಕುರಿತಂತೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಗೋಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಬಿ.ಎಮ್.ಐ ವರದಿ ಮಾಡಿದೆ.

ಹಿಂದೂಗಳ ಪೂಜ್ಯನೀಯ ಪ್ರಾಣಿ ಎಂದೇ ಕರೆಯುವ ಗೋವಿನ ರಕ್ಷಣೆಯ ಕುರಿತಂತೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಗೋಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಬಿ.ಎಮ್.ಐ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ದೇಶದ ಕೆಲವು ರಾಜ್ಯಗಳಲ್ಲಿ ಗೋಮಾಂಸ ಕಟ್ಟುನಿಟ್ಟಾಗಿ ನಿಷೇಧ ಮಾಡಿದ್ದರ ಹೊರತಾಗಿಯೂ ಇಡೀ ವಿಶ್ವಕ್ಕೆ ಗೋಮಾಂಸ ರಫ್ತಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಭಾರತದಲ್ಲಿ ಶೇ.50% ಗೋ ಮಾಂಸವು ದೇಶದೊಳಗೆ ಆಹಾರವಾಗಿ ಬಳಸಲಾಗುತ್ತಿದೆ. ಆದರೆ ಬ್ರೆಜಿಲ್'ನಲ್ಲಿ 80% ಮಾಂಸವನ್ನು ಬಳಸುತ್ತಿದ್ದಾರೆ.

ಈ ಹಿಂದೆ 2014ರ ವರೆಗೂ ಬ್ರೆಜಿಲ್ ಅತಿ ಹೆಚ್ಚು ಗೋಮಾಂಸವನ್ನು ರಫ್ತು ಮಾಡುತ್ತಿತ್ತು. ಇದೀಗ ಬ್ರೆಜಿಲ್ ದೇಶವನ್ನು ಹಿಂದಿಕ್ಕಿರುವ ಭಾರತ 2016-2020 ರವರೆಗಿನ ಅವಧಿಯಲ್ಲಿ ಸರಾಸರಿ 2.2 ಮಿಲಿಯನ್ ಟನ್ ಗೋಮಾಂಸ ರಫ್ತು ಮಾಡುವತ್ತ ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ಬಿ.ಎಮ್.ಐ ವರದಿ ಮಾಡಿದೆ.(ಬ್ರೆಜಿಲ್ 2 ಮಿಲಿಯನ್ ಟನ್ ಗೋಮಾಂಸ ರಫ್ತು ಮಾಡಿದರೆ, ಆಸ್ಟ್ರೇಲಿಯಾ 1.5 ಮಿಲಿಯನ್ ಟನ್ ರಫ್ತು ಮಾಡುತ್ತಿದೆ),

ಭಾರತದ ಹಲವು ಭಾಗಗಳಲ್ಲಿ ಗೋಮಾಂಸಕ್ಕೆ ನಿಷೇಧವಿರುವ ಹಿನ್ನೆಲೆ ಅಕ್ರಮವಾಗಿ ಜೀವಂತ ಗೋವುಗಳನ್ನು ಬಾಂಗ್ಲಾದೇಶಕ್ಕೆ, ಅಲ್ಲಿ ಮಾಂಸವನ್ನು ಸಂಸ್ಕರಿಸಿ ಚೀನಾ, ವಿಯೆಟ್ನಾಂಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಬಿ.ಎಮ್.ಐ ವರದಿ ಮಾಡಿದೆ.

ಇನ್ನು ಗೋಮಾಂಸ ನಿಷೇಧದ ಬಗ್ಗೆ ದ್ವನಿಯೆತ್ತುವ ಬಿಜೆಪಿ ಆಡಳಿತ ವಿರುವ ರಾಜ್ಯಗಳಾದ ಹರಿಯಾಣ ಹಾಗೂ ಮಹರಾಷ್ಟ್ರ ಗೋಮಾಂಸ ರಫ್ತಿನಲ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದೆ.