ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಇರುವ ರೀತಿ ಭಾರತದಲ್ಲೂ ವಿವಿಧ ಭಾಗಕ್ಕೆ ಪ್ರತ್ಯೇಕ ‘ಸಮಯ ವಲಯ' (ಟೈಮ್‌ ಜೋನ್‌) ನಿಗದಿಪಡಿಸುವ ಸಾಧ್ಯಾಸಾಧ್ಯತೆ ಪರಿಶೀಲಿಸುವ ನಿಟ್ಟಿನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧ್ಯಯನ ಆರಂಭಿಸಿದೆ.

ನವದೆಹಲಿ: ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಇರುವ ರೀತಿ ಭಾರತದಲ್ಲೂ ವಿವಿಧ ಭಾಗಕ್ಕೆ ಪ್ರತ್ಯೇಕ ‘ಸಮಯ ವಲಯ' (ಟೈಮ್‌ ಜೋನ್‌) ನಿಗದಿಪಡಿಸುವ ಸಾಧ್ಯಾಸಾಧ್ಯತೆ ಪರಿಶೀಲಿಸುವ ನಿಟ್ಟಿನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧ್ಯಯನ ಆರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಸಮಯ ವಲಯ ನಿಗದಿ ಮಾಡಬೇಕು ಎಂದು ಅರುಣಾಚಲಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಇತ್ತೀಚೆಗಷ್ಟೇ ಆಗ್ರಹಪಡಿಸಿದ್ದರು. ಇದರ ಬೆನ್ನಲ್ಲೇ ಅಧ್ಯಯನ ನಡೆಯುತ್ತಿರುವ ಕುರಿತು ಘೋಷಣೆಯಾಗಿದೆ. ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗುತ್ತಿದೆ ಎಂದು ಇಲಾಖೆಯ ಕಾರ್ಯದರ್ಶಿ ಆಶುತೋಷ್‌ ಶರ್ಮಾ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳು, ಅಂಡಮಾನ್‌- ನಿಕೋಬಾರ್‌ಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಬೇಗನೆ ಆಗುತ್ತದೆ. ದೇಶದ ಉಳಿದ ಭಾಗಗಳಲ್ಲಿ ಬೆಳಗ್ಗೆ 5.30ರಿಂದ 6ರ ವೇಳೆಗೆ ಸೂರ್ಯೋದಯವಾದರೆ, ಅರುಣಾಚಲಪ್ರದೇಶ, ಅಂಡಮಾನ್‌ ಮತ್ತಿತರೆಡೆ ಬೆಳಗ್ಗೆ 4.30ಕ್ಕೇ ಸೂರ್ಯೋದಯವಾಗುತ್ತದೆ. ಸಂಜೆ 5ರಿಂದ 6 ಗಂಟೆ ವೇಳೆಗೆ ಸೂರ್ಯಾಸ್ತವಾಗುತ್ತದೆ.

ಒಂದೇ ಸಮಯ ವಲಯ ಇರುವುದರಿಂದ ದೇಶದ ಎಲ್ಲೆಡೆ ಕಚೇರಿ ಅವಧಿ ಒಂದೇ ರೀತಿ ಇದೆ. ಆದರೆ ಬೇಗನೆ ಸೂರ್ಯೋದಯವಾಗುವುದರಿಂದ ಕಚೇರಿ ಸಮಯ ಆರಂಭವಾಗುವಷ್ಟರಲ್ಲಿ ಅರ್ಧದಿನ ಮುಗಿದು ಹೋಗಿರುತ್ತದೆ ಎಂಬುದು ಅರುಣಾಚಲಪ್ರದೇಶವನ್ನು ಒಳಗೊಂಡ ಈಶಾನ್ಯ ರಾಜ್ಯಗಳ ಅಳಲು.