ಇನ್ನು ಕೆಲವೇ ದಶಕಗಳಲ್ಲಿ ಜನರು ಚಂದ್ರನ ಅಂಗಳಕ್ಕೆ ಹನಿಮೂನ್'ಗೆ ಹೋಗಬಹುದಾದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದಿದ್ದಾರೆ.

ನವದೆಹಲಿ(ಫೆ.19): ಒಂದೇ ರಾಕೆಟ್ ಬಳಸಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಮತ್ತೊಂದು ಸಾಧನೆಗೆ ಮುಂದಾಗುತ್ತಿದೆ. ದೇಶದ ಇಂಧನ ಅಗತ್ಯಗಳನ್ನು ಈಡೇರಿಸಲು ಚಂದ್ರ ಉಪಗ್ರಹದಿಂದ ಹೀಲಿಯಂ-3 ತರುವ ಯೋಜನೆಯನ್ನು ಹಾಕಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಂದ್ರನ ಅಂಗಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೀಲಿಯಂ ಇದೆ. ಅದರಿಂದ ಇಡೀ ವಿಶ್ವದ ಇಂಧನ ಅಗತ್ಯಗಳನ್ನು ಈಡೇರಿಸಬಹುದು. ಅದನ್ನು ತರಲು ವಿಶ್ವದ ವಿವಿಧ ದೇಶಗಳು ಪ್ರಯತ್ನಿಸುತ್ತಿವೆ. ಇಸ್ರೋ ಕೂಡ ಹೀಲಿಯಂ-3 ಹೇರಳವಾಗಿರುವ ಚಂದ್ರನ ಅಂಗಳದ ಧೂಳನ್ನು ಗಣಿಗಾರಿಕೆ ನಡೆಸಲು ಉದ್ದೇಶಿಸಿದೆ. 2030ರೊಳಗೆ ಆ ಗುರಿ ತಲುಪಲಾಗುತ್ತದೆ ಎಂದು ಇಸ್ರೋದ ವಿಜ್ಞಾನಿ ಶಿವತನು ಪಿಳ್ಳೈ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಇನ್ನು ಕೆಲವೇ ದಶಕಗಳಲ್ಲಿ ಜನರು ಚಂದ್ರನ ಅಂಗಳಕ್ಕೆ ಹನಿಮೂನ್'ಗೆ ಹೋಗಬಹುದಾದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದಿದ್ದಾರೆ.

ವಿದ್ಯುತ್ ಉತ್ಪಾದನೆಗೆ ಪರಮಾಣು ಸ್ಥಾವರಗಳಲ್ಲಿ ಯುರೇನಿಯಂ ಬಳಸಲಾಗುತ್ತದೆ. ಇದು ಬಲು ಅಪಾಯಕಾರಿ. ಆದರೆ ಯುರೇನಿಯಂ ಬದಲಿಗೆ ಹೀಲಿಯಂ ಬಳಸಿದರೆ ಅಪಾಯವೂ ಕಡಿಮೆ, ಅದರ ಸಾಮರ್ಥ್ಯವೂ ಹೆಚ್ಚು ಎಂಬುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ.