ನವದೆಹಲಿ(ಜೂ.02): ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಕರೆದಿದ್ದ ಇಫ್ತಾರ್ ಕೂಟಕ್ಕೆ ಭಂಗ ಉಂಟು ಮಾಡಿರುವ ಪಾಕಿಸ್ತಾನ, ಇಫ್ತಾರ್ ಕೂಟದ ಅತಿಥಿಗಳನ್ನು ತಡೆದು ಉದ್ಘಟತನ ಮೆರೆದಿದೆ.

ಇಸ್ಲಾಮಾಬಾದ್‌ನಲ್ಲಿರುವ ಹೋಟೆಲ್ ಸೆರೆನಾದಲ್ಲಿ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಆದರೆ ಸೆರೆನಾ ಹೋಟೆಲ್‌ನ್ನು ಸುತ್ತುವರೆದ ಪಾಕ್ ಅಧಿಕಾರಿಗಳು, ಇಫ್ತಾರ್ ಕೂಟಕ್ಕೆ ಬಂದ ಅತಥಿಗಳನ್ನು ವಾಪಸ್ ಕಳುಹಿಸಿದರು.

ಪಾಕಿಸ್ತಾನದ ಉದ್ಘಟತನವನ್ನು ತೀವ್ರ ವಿರೋಧಿಸಿರುವ ಭಾರತ, ಪಾಕ್ ಅನಾಗರಿಕ ವರ್ತನೆ ತೋರಿದೆ ಎಂದು ಕಟು ಶಬ್ಧಗಳಿಂದ ಟೀಕಿಸಿದೆ.

ಈ ಕುರಿತು ಪತ್ರ ಬರೆದಿರುವ ಅಜಯ್ ಬಿಸಾರಿಯಾ, ಪಾಕಿಸ್ತಾನದ ವರ್ತನೆ ನಾಗರಿಕ ಸಮಾಜಕ್ಕೆ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ರಾಯಭಾರಿ ಹಕ್ಕಿನ ಉಲ್ಲಂಘನೆ ಮಾಡಿರುವ ಪಾಕಿಸ್ತಾನ ಈ ಕುರಿತು ಸೂಕ್ತ ತನಿಖೆ ನಡೆಸಲಿದೆ ಎಂದು ಭಾರತ ಭರವಸೆ ವ್ಯಕ್ತಪಡಿಸಿದೆ.