ಚೀನಾಕ್ಕೆ ನೆರೆಯ ರಾಷ್ಟ್ರಗಳ ಜೊತೆ ಸಂಘರ್ಷ ಮಾಡಲು ಇಷ್ಟವಿಲ್ಲ. ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸುತ್ತದೆ. ಆದರೆ ಸಾರ್ವಭೌಮತೆಯ ಪ್ರಶ್ನೆ ಎದುರಾದಾಗ ಯುದ್ಧಕ್ಕೆ

ಬೀಜಿಂಗ್(ಜು.18): ಸಿಕ್ಕಿಂ'ನ ವಿವಾದಿತ ಪ್ರದೇಶ ಡೋಕ್ಲಾಮ್'ಗೆ ಸಂಬಂಧಿಸಿದಂತೆ ಹೆಚ್ಚಿನ ಅನಾಹುತವನ್ನು ತಪ್ಪಿಸುವ ಸಲುವಾಗಿ ಭಾರತ ತನ್ನ ಸೈನಿಕರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಚೀನಾ ಎಚ್ಚರಿಕೆ ನೀಡಿದೆ.

ಡೋಕ್ಲಾಮ್ ಬಿಕ್ಕಟ್ಟು ಒಂದು ತಿಂಗಳು ಕಳೆದರೂ ನಿವಾರಣೆಯಾಗದ ಕಾರಣ ಕಳೆದ ವಾರ ಬೀಜಿಂಗ್'ನಲ್ಲಿರುವ ವಿವಿಧ ದೇಶಗಳ ರಾಯಭಾರಿಗಳನ್ನು ಭೇಟಿ ಮಾಡಿ ತನ್ನ ತಾಳ್ಮೆಗೂ ಒಂದು ಮಿತಿಯಿದೆ ಏನು ಬೇಕಾದರೂ ಆಗಬಹುದು ಎಂದು ಸಂದೇಶ ತಿಳಿಸಿದೆ. ಇದರ ಜೊತೆಗೆ ಭಾರತ ಕೂಡ ರಾಯಭಾರಿಗಳಿಗೆ 'ಪರಿಸ್ಥಿತಿ ಗಂಭೀರತೆ ಪಡೆದಿಲ್ಲ ಎಂದು ಮಾಹಿತಿ ತಿಳಿಸಿದೆ ಎನ್ನಲಾಗಿದೆ.

ಚೀನಕ್ಕೆ ನೆರೆಯ ರಾಷ್ಟ್ರಗಳ ಜೊತೆ ಸಂಘರ್ಷ ಮಾಡಲು ಇಷ್ಟವಿಲ್ಲ. ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸುತ್ತದೆ. ಆದರೆ ಸಾರ್ವಭೌಮತೆಯ ಪ್ರಶ್ನೆ ಎದುರಾದಾಗ ಯುದ್ಧಕ್ಕೆ ಸಿದ್ದವಿರುತ್ತದೆ ಎಂದು ಚೀನಾದ ನಿಯತಕಾಲಿಕೆ ‘ಗ್ಲೋಬಲ್ ಟೈಮ್ಸ್’ತನ್ನ ಲೇಖನದಲ್ಲಿ ಪ್ರಕಟಿಸಿದೆ.