ನವದೆಹಲಿ[ಸೆ. 30]  ನೀವು ಬಂದ ಮೇಲೆ ಈ ದೇಶ ಬದಲಾಗಿದೆ. ಹೀಗೆಂದು ಪ್ರಧಾನಿಗೆ ಹೇಳಿದ್ದು ಹಿರಿಯ ಗಾಯಗಿ ಲತಾ ಮಂಗೇಶ್ಕರ್. ಲತಾ ಮಂಗೇಶ್ಕರ್ ಅವರ ಜನ್ಮದಿನಕ್ಕೆ ಶುಭಕೋರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದರು.

ಸೆ. 28 ರಂದು ಲತಾ ಮಂಗೇಶ್ಕರ್ ಅವರಿಗೆ ಜನ್ಮದಿನದ ಸಂಭ್ರಮ. ಆದರೆ ಪ್ರಧಾನಿ ನರೇಂದ್ರ ಮೋದಿ ಒಂದು ವಾರ ಕಾಲ ಅಮೆರಿಕ ಪ್ರವಾಸಕ್ಕೆ ಹೊರಡುವವರಿದ್ದುದರಿಂದ ಮುಂಗಡವಾಗಿ ಶುಭಾಶಯ ಕೋರಲು ಕರೆ ಮಾಡಿದ್ದರು.

ಪ್ರಧಾನಿ ಅಮೆರಿಕ ಪ್ರವಾಸ: ಭಾರತದ ಭವಿಷ್ಯಕ್ಕೆ ಮೋದಿ ವಿಶ್ವಾಸ...

ನರೇಂದ್ರ ಮೋದಿ ತಮ್ಮ ಪ್ರಸಿದ್ಧ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿಯೂ ಲತಾ ಅವರ ಹೆಸರು  ಉಲ್ಲೇಖಿಸಿದ್ದರು. ಲತಾ ಮಂಗೇಶ್ಕರ್ ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದರು.

ಮನ್ ಕೀ ಬಾತ್ ನಲ್ಲಿ ಲತಾ ಅವರನ್ನು ದೀದಿ ಎಂದು ಕರೆದ ಮೋದಿ... ನೀವು ಹಲವಾರು ಶಕೆಗಳಿಗೆ ಇತಿಹಾಸದ  ದಾಖಲೆಯಾಗಿದ್ದೀರಿ. ನಾನು ಕಳೆದ ವಾರವೇ ಕರೆ ಮಾಡಿ ಶುಭಾಶಯ ಹೇಳಿದ್ದೆ ಎಂದು ತಿಳಿಸಿದ್ದಾರೆ.

ನಾನು ಯಾವುದೇ ವೈಯಕ್ತಿಕ ವಿಚಾರ ಮಾತನಾಡಿಲ್ಲ. ಪ್ರಣಾಮಗಳು... ಎಂದು ಹೇಳಿ ಮಾತು ಶುರುಮಾಡಿದ್ದೆ ಎಂದು ಲತಾ ಅವರೊಂದಿಗಿನ ಸಂಭಾಷಣೆಯಯ ಅನುಭವವನ್ನು ಶೋತೃಗಳೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನೊಂದು ಕ ಡೆ ಮನ್ ಕೀ ಬಾತ್ ನಲ್ಲೂ ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ಧನ್ಯವಾದ ಸಲ್ಲಿಸಿರುವ ಲತಾ ಮಂಗೇಶ್ಕರ್, ತಮ್ಮ ಕೆಲಸಗಳಿಂದಲೇ ದೊಡ್ಡ ವ್ಯಕ್ತಿಯಾದವರಿಂದ ಶುಭಾಶಯ ಸ್ವೀಕಾರ ನಿಜಕ್ಕೂ ಆನಂದ ತರುತ್ತದೆ ಎಂದು ಹೇಳಿದ್ದಾರೆ.