Asianet Suvarna News Asianet Suvarna News

ಸ್ಟ್ರಾಂಗ್ ಮೆಸೆಜ್ ಅಂದ್ರೆ ಇದು: ಹೀಗಿತ್ತು ಚೀನಾಗೆ ಭಾರತ ಹೇಳಿದ್ದು!

ಚೀನಾಗೆ ಸ್ಟ್ರಾಂಗ್ ಮೆಸೆಜ್ ಕಳುಹಿಸಿದ ಭಾರತ| ಪಾಕಿಸ್ತಾನದಲ್ಲಿ ಸಿಪಿಇಸಿ ಮೂಲಕ ಮೂಗು ತೂರಿಸುತ್ತಿರುವ ಚೀನಾ| ಕಾಶ್ಮೀರ ವಿಚಾರದಲ್ಲಿ ಬೇಡದ ಹಸ್ತಕ್ಷೇಪ ಮಾಡುತ್ತಿರುವ ಚೀನಾಗೆ ಎಚ್ಚರಿಕೆಯ ಸಂದೇಶ| ಕಾಶ್ಮೀರದ ಕುರಿತು ಪಾಕಿಸ್ತಾನ-ಚೀನಾ ನೀಡಿರುವ ಜಂಟಿ ಹೇಳಿಕೆ ತಿರಸ್ಕರಿಸಿದ ಭಾರತ| ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ ಭಾರತ| ಕಾಶ್ಮೀರ ಕುರಿತು ಚೀನಾ-ಪಾಕಿಸ್ತಾನದ ಜಂಟಿ ಹೇಳಿಕೆ ಎಂದು ಬಾಲಿಶ ಎಂದ ಭಾರತದ ವಿದೇಶಾಂಗ ಕಾರ್ಯದರ್ಶಿ| ಸಿಪಿಇಸಿ ಯೋಜನೆಗೆ ಆತಂಕ ವ್ಯಕ್ತಪಡಿಸಿದ ರವೀಶ್ ಕುಮಾರ್|

India Rejects China-Pakistan Joint Statement on Kashmir
Author
Bengaluru, First Published Sep 10, 2019, 7:39 PM IST

ನವದೆಹಲಿ(ಸೆ.10): ಪಾಕಿಸ್ತಾನದಲ್ಲಿ ಸಿಪಿಇಸಿ ಮೂಲಕ ಅಗತ್ಯಕ್ಕಿಂತ ಹೆಚ್ಚು ಮೂಗು ತೂರಿಸುತ್ತಿರುವ, ಕಾಶ್ಮೀರ ವಿಚಾರದಲ್ಲಿ ಬೇಡದ ಹಸ್ತಕ್ಷೇಪ ಮಾಡುತ್ತಿರುವ ಚೀನಾಗೆ ಭಾರತ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕಾಶ್ಮೀರದ ಕುರಿತು ಪಾಕಿಸ್ತಾನ-ಚೀನಾ ನೀಡಿರುವ ಜಂಟಿ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಹೇಳಿರುವ ಭಾರತ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ.  

ಪಾಕಿಸ್ತಾನ ಭೇಟಿಯ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಕಾಶ್ಮೀರದ ವಿಷಯವಾಗಿ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಚೀನಾ-ಪಾಕಿಸ್ತಾನ ಜಂಟಿ ಹೇಳಿಕೆಯನ್ನು ಭಾರತ ತಿರಸ್ಕರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಇದೇ ವೇಳೆ ಭಾರತಕ್ಕೆ ಸೇರಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚೀನಾ-ಪಾಕ್ ಎಕಾನಾಮಿಕ್ ಕಾರಿಡಾರ್ ಯೋಜನೆ ಚಟುವಟಿಕೆಗಳು ನಡೆಯುತ್ತಿರುವುದಕ್ಕೂ ಭಾರತ ಆತಂಕ ವ್ಯಕ್ತಪಡಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೇರೆ ರಾಷ್ಟ್ರಗಳ ಹಸ್ತಕ್ಷೇಪದಿಂದ ಸ್ಥಿತಿಗತಿಗಳ ಬದಲಾವಣೆಯನ್ನು ಭಾರತ ವಿರೋಧಿಸುತ್ತದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.

Follow Us:
Download App:
  • android
  • ios