ವಾಷಿಂಗ್ಟನ್ (ಸೆ.10): ಪರಮಾಣು ಪೂರೈಕೆದಾದರ ಸಮೂಹದ (ಎನ್'ಎಸ್'ಜಿ) ಪೂರ್ಣ ಪ್ರಮಾಣದ ಸದಸ್ಯತ್ವ ಕ್ಕಾಗಿ ಭಾರತವು ಎಲ್ಲಾ ರೀತಿಯಲ್ಲಿ ಅರ್ಹವಾಗಿದೆಯೆಂದು ಅಮೆರಿಕಾ ಪುನರುಚ್ಚರಿಸಿದೆ.

ಪತ್ರಿಕಾಗೋಷ್ಠಿಯೋಮದನ್ನು ಉದ್ದೇಶಿಸಿ ಮಾತನಾಡಿದ ಮಾಧ್ಯಮ ಸಂಪರ್ಕ ಕೇಂದ್ರದ ನಿರ್ದೇಶಕಿ ಎಲಿಝಬೆತ್ ಟ್ರುಡ್ಯೂ, ಅಮೆರಿಕಾ ಸರ್ಕಾರವು ಭಾರತ ಹಾಗೂ ಇತರ ಎನ್'ಎಸ್'ಜಿ ಸದಸ್ಯ ರಾಷ್ಟ್ರಗಳೊಂದಿಗೆ ಮಾಉಕತೆ ನಡೆಸುತ್ತಿದೆಯೆಂದು ಹೇಳಿದ್ದಾರೆ.

ಭಾರತದ ಸದಸ್ಯತ್ವವನ್ನು ವಿರೋಧಿಸುತ್ತಿರುವ ಚೀನಾ ಜೊತೆ ಮಾತುಕತೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಹೊಸ ಸದಸ್ಯತ್ವ ನೀಡುವ ಬಗ್ಗೆ ಎರಡು ದೇಶಗಳ ನಡುವೆ ಯಾವುದೇ ಒಮ್ಮತಾಭಿಪ್ರಾಯ ಉಂಟಾಗಿಲ್ಲವೆಂದು ಅವರು ಹೇಳಿದ್ದಾರೆ.