ಅಮೆರಿಕಾದ 30 ಉತ್ಪನ್ನಗಳ ಮೇಲೆ ಭಾರತ ಸುಂಕ

India proposes to raise customs duty on 30 US products
Highlights

  • 241 ಮಿಲಿಯನ್ ಡಾಲರ್ ಮೊತ್ತದ ಆಮದು ಸುಂಕ 
  • ವಿಶ್ವ ವ್ಯಾಪಾರ ಸಂಸ್ಥೆಗೆ ಪರಿಸ್ಕೃತ ಮನವಿ ಸಲ್ಲಿಕೆ

ನವದೆಹಲಿ[ಜೂ.16]: ಜಾಗತಿಕ ಮಟ್ಟದಲ್ಲಿ ತೆರಿಕೆ ಸಮರ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಅಮೆರಿಕಾಕ್ಕೆ ರಫ್ತಾಗುವ 30 ಉತ್ಪನ್ನಗಳ ಮೇಲೆ ಭಾರತವು ಸುಂಕ ವಿಧಿಸಲು ಮುಂದಾಗಿದೆ.ಈ ಹಿನ್ನಲೆಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಗೆ ಪರಿಸ್ಕೃತ ಮನವಿ ಸಲ್ಲಿಸಿದೆ. ಅಮೆರಿಕಾ ಕೂಡ ಭಾರತಕ್ಕೆ 241 ಮಿಲಿಯನ್ ಡಾಲರ್ ಮೊತ್ತದ ಆಮದು ಸುಂಕ ವಿಧಿಸಿತ್ತು. ಭಾರತ ವಿಧಿಸುವ ಮೊತ್ತವು ಅಷ್ಟೆ ಮೊತ್ತದ್ದಾಗಿರುತ್ತದೆ ಎಂದು ಹೇಳಲಾಗಿದೆ. 

ಅಮೆರಿಕಾ ಸರ್ಕಾರದಿಂದ ಆಮದು ಮಾಡಿಕೊಳ್ಳುವ ಮೋಟರ್ ಸೈಕಲ್, ಉಕ್ಕು, ಬೋರಿಕ್ ಆಮ್ಲ,ಲೆಂಟಿಲ್ ಉತ್ಪನ್ನಗಳ ಶೇ.50 ರಷ್ಟು ರಫ್ತು ಸುಂಕವನ್ನು ಹೆಚ್ಚಿಸಲು ಉದ್ದೇಶಿಸಿದೆ. ಈ ಹಿನ್ನಲೆಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯೊಂದಿಗೆ ಮಾತನಾಡಲು ಭಾರತವು ಸಿದ್ದವಾಗಿದೆ.

ಮೇ ಮೊದಲ ವಾರದಲ್ಲಿ ಅಮೆರಿಕಾದಿಂದ ರಪ್ತಾಗುವ ಬಾದಾಮಿ,ಆಪಲ್ ಸೇರಿದಂತೆ  20 ಉತ್ಪನ್ನಗಳ ಮೇಲೆ ಶೇ.10ರಿಂದ 100ರವರೆಗೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಭಾರತವು  ಸ್ಟೀಲ್ ಉತ್ಪನ್ನಗಳ ಮೇಲೆ ಹೆಚ್ಚು ಸುಂಕ ವಿಧಿಸಿರುವುದಕ್ಕೆ ಡೊನಾಲ್ಡ್ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿ ಇಲ್ಲಿಗೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕವನ್ನು ಏರಿಸಿದ್ದರು. ಈ ನಡುವೆ ಟ್ರಂಪ್ ಸರ್ಕಾರ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ 50 ಬಿಲಿಯನ್ ಡಾಲರ್ ಸುಂಕ ವಿಧಿಸುವ ನಿರ್ಧಾರ ಕೈಗೊಂಡಿದೆ.

loader