ಭಾರತದ ದಕ್ಷಿಣ ಭಾಗದಿಂದ ಚೀನಾದಾದ್ಯಂತ ಯಾವುದೇ ಪ್ರದೇಶದಿಂದಲೂ ದಾಳಿ ಮಾಡಬಲ್ಲ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಇದು ಸಿದ್ಧಗೊಂಡರೆ ಚೀನಾ ಸವಾಲಿಗೆ ಪ್ರಬಲವಾದ ಪೈಪೋಟಿಯನ್ನು ನೀಡಿ ಮಣಿಸಲು ಸಾಧ್ಯವಾಗುತ್ತದೆ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಭಾರತ ಆಧುನಿಕರಣಗೊಳಿಸಲಾಗುತ್ತಿದೆ ಎಂದು ಅಮೆರಿಕಾದ ಇಬ್ಬರು ಪರಮಾಣು ತಜ್ಞರು ತಿಳಿಸಿದ್ದಾರೆ.

ವಾಷಿಂಗ್ಟನ್ (ಜು.13): ಸಿಕ್ಕಿಂ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಭೂವಿವಾದಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಎರಡೂ ದೇಶಗಳ ಸೇನೆ ಬೀಡು ಬಿಟ್ಟು ಸಮಾರಾಭ್ಯಾಸ ನಡೆಸುತ್ತಿವೆ.

ಭಾರತದ ದಕ್ಷಿಣ ಭಾಗದಿಂದ ಚೀನಾದಾದ್ಯಂತ ಯಾವುದೇ ಪ್ರದೇಶದಿಂದಲೂ ದಾಳಿ ಮಾಡಬಲ್ಲ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಇದು ಸಿದ್ಧಗೊಂಡರೆ ಚೀನಾ ಸವಾಲಿಗೆ ಪ್ರಬಲವಾದ ಪೈಪೋಟಿಯನ್ನು ನೀಡಿ ಮಣಿಸಲು ಸಾಧ್ಯವಾಗುತ್ತದೆ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಭಾರತ ಆಧುನಿಕರಣಗೊಳಿಸಲಾಗುತ್ತಿದೆ ಎಂದು ಅಮೆರಿಕಾದ ಇಬ್ಬರು ಪರಮಾಣು ತಜ್ಞರು ತಿಳಿಸಿದ್ದಾರೆ.

ಪಾಕಿಸ್ತಾನವನ್ನು ನಾಶ ಮಾಡುವಷ್ಟು ಅಣ್ವಸ್ತ್ರಗಳು ಭಾರತದ ಬಳಿಯಿವೆ. ಅದಲ್ಲದೆ ಅಗ್ನಿ4, 5,6 ಅಣ್ವಸ್ತ್ರಗಳು ಚೀನಾದ ನಗರಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈಗ ಆ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದು, ಚೀನಾದ ಸದ್ದನ್ನು ಅಡಗಿಸುವಷ್ಟು ಶಕ್ತಿಯನ್ನು ಹೊಂದಿರಲಿದೆ. ಈ ಕಾರಣದಿಂದ ಭಾರತದ ಮೇಲೆ ದಾಳಿ ನಡೆಸುವವರು ಎಚ್ಚರದಿಂದರಬೇಕು ಎಂದು ಹ್ಯಾನ್ಸ್ ಎಂ ಕ್ರಿಸ್ಟೆನ್ಸನ್ ಮತ್ತು ರಾಬರ್ಟ್ ಎಸ್ ನಾರ್ರಿಸ್ ಎಂಬ ತಜ್ಞರು ‘ಇಂಡಿಯನ್ ನ್ಯೂಕ್ಲಿಯರ್ ಫೋರ್ಸಸ್ 2017’ ಎಂಬ ಲೇಖನದಲ್ಲಿ ತಿಳಿಸಿದ್ದಾರೆ.

ಭಾರತದ ಬಳಿ ಪ್ರಸ್ತುತ 150 ರಿಂದ 200 ಅಣ್ವಸ್ತ್ರ ಸಿಡಿತಲೆಗಳಿದ್ದು,ಮತ್ತಷ್ಟು ಅಷ್ಟೆ ಸಂಖ್ಯೆಯ ಅಣ್ವಸ್ತ್ರಗಳನ್ನು ತಯಾರಿಸುವುದಕ್ಕಾಗಿ 600 ಕೆಜಿ ಪ್ಲುಟೋನಿಯಂ ಅನ್ನು ಭಾರತ ಉತ್ಪಾದಿಸಿದೆ ಎಂದು ತಜ್ಞರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

(ಸಾಂಧರ್ಬಿಕ )