ಎಫ್‌ಡಿಐಯಲ್ಲಿ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೆರೆಯ ಚೀನಾ ದೇಶವನ್ನು ಭಾರತ ಹಿಂದಿಕ್ಕಿದೆ

ಮುಂಬೈ[ಡಿ.29]: ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಯಲ್ಲಿ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೆರೆಯ ಚೀನಾ ದೇಶವನ್ನು ಭಾರತ ಹಿಂದಿಕ್ಕಿದೆ.

2018ರಲ್ಲಿ ಭಾರತಕ್ಕೆ 2.6 ಲಕ್ಷ ಕೋಟಿ ರು. ಬಂಡವಾಳ ಹರಿದುಬಂದಿದ್ದರೆ, ಚೀನಾ 2.2 ಲಕ್ಷ ಕೋಟಿ ರು. ಹೂಡಿಕೆಗಷ್ಟೇ ತೃಪ್ತಿ ಪಟ್ಟುಕೊಂಡಿದೆ. ಸ್ಥಿರ ಆರ್ಥಿಕತೆ, ದಿವಾಳಿ ಸಂಹಿತೆ ಹಾಗೂ ಹೊಸ ಹೊಸ ಕ್ಷೇತ್ರಗಳಲ್ಲಿ ಹೆಚ್ಚಾಗುತ್ತಿರುವ ಅವಕಾಶಗಳೇ ಭಾರತದ ಸಾಧನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ವಿದೇಶಿ ಹೂಡಿಕೆದಾರರಿಗೆ ಮೊದಲಿನಿಂದಲೂ ಚೀನಾ ನೆಚ್ಚಿನ ದೇಶವಾಗಿತ್ತು. ಆದರೆ ಅಮೆರಿಕದೊಂದಿಗಿನ ವ್ಯಾಪಾರ ಬಿಕ್ಕಟ್ಟು ಚೀನಾಕ್ಕೆ ಹೊಡೆತ ನೀಡಿರುವಂತಿದೆ. ಹೀಗಾಗಿ ಆ ದೇಶದ ವಿದೇಶಿ ಹೂಡಿಕೆಯಲ್ಲಿ ಇಳಿಮುಖವಾಗಿದೆ ಎಂದು ಹೇಳಲಾಗುತ್ತಿದೆ.