ಭಾರತ ಹಾಗೂ ಪಾಕಿಸ್ತಾನದ್ ನಡುವೆ ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಹೀಗಾಘಿ ಉಭಯ ದೇಶಗಳ ನಡುವೆ ಸಂಚರಿಸುತ್ತಿದ್ದ ರೈಲುಗಳ ಸಂಚಾರವನ್ನು ತಡೆಯಲಾಗಿದೆ.ಈ ಎಲ್ಲಾ ಕಾರಣಗಳಿಂದಾಗಿ ಮದುವೆಯೇ ರದ್ದಾದ ಪ್ರಕರಣ ಬೆಳಕಿಗೆ ಬಂದಿದೆ.
ಬಾರ್ಮೇಡ್[ಮಾ.06]: ಪುಲ್ವಾಮಾ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ಉಂಟಾಗಿರುವುದರಿಂದ ಭಾರತದ ವರ ಹಾಗೂ ಪಾಕಿಸ್ತಾನದ ವಧುವಿನ ವಿವಾಹವೊಂದು ಮುರಿದುಬಿದ್ದಿದೆ.
ಬಾರ್ಮೇಡ್ ಜಿಲ್ಲೆಯ ಗಡಿ ಗ್ರಾಮದ ಖೆಜಾದ್ ಕಾ ಪಾರ್ ಗ್ರಾಮದ ವರ ಮಹೇಂದ್ರ ಸಿಂಗ್ ಹಾಗೂ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಮರ್‌ಕೋಟ್ ಜಿಲ್ಲೆಯ ಸಿನೋಯಿ ಗ್ರಾಮದ ವಧು ಚಗನ್ ಕನ್ವಾರ್ ವಿವಾಹ ನಿಶ್ಚಯವಾಗಿತ್ತು. ಮದುವೆ ಸಮಾರಂಭಕ್ಕೆ ತೆರಳಲು ಥಾರ್ ಎಕ್ಸ್‌ಪ್ರೆಸ್ ರೈಲನ್ನು ವರನ ಕುಟುಂಬ ಕಾಯ್ದಿರಿಸಿತ್ತು.
ಪಾಕಿಸ್ತಾನದ ಲಾಹೋರ್ ಮತ್ತು ಭಾರತದ ಅಟ್ಟಾರಿ ಮೂಲಕ ಸೋಮವಾರ ಮತ್ತು ಗುರುವಾರ ಈ ರೈಲು ಸಂಚರಿಸುತ್ತದೆ. ಆದರೆ, ಉದ್ವಿಗ್ನ ಸ್ಥಿತಿಯ ಹಿನ್ನೆಲೆಯಲ್ಲಿ ಪಾಕ್ ಅಧಿಕಾರಿಗಳು ರೈಲು ಸಂಚಾರವನ್ನು ಅಮಾನತುಗೊಳಿಸಿದ್ದರಿಂದ ರೈಲು ಸಂಚಾರ ರದ್ದುಗೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಮದುವೆಯನ್ನು ರದ್ದುಗೊಳಿಸಲಾಗಿದೆ.
