'ಯುವಕರು ದೇಶದ ಆಸ್ತಿಯಿದ್ದಂತೆ ಆದರೆ, ಬಹುತೇಕ ಕಾಲೇಜು ಹಾಗೂ ವಿವಿಗಳಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ವಿಷಾದಿಸಿದ್ದಾರೆ.

ಚಿಂದ್ವಾರ (ಡಿ.14): ಭಾರತದಲ್ಲಿ ಯುವಕರು ನಿರುದ್ಯೋಗಿಗಳಾಗಿ ಹೀಗೆ ಮುಂದವರಿದರೆ ‘ಅಶಾಂತಿ ಹಾಗೂ ಹತಾಶೆ’ ಹೆಚ್ಚಾಗಲಿದೆ. ಆದ್ದರಿಂದ ಯುವಕರಿಗೆ ಕೌಶಲ್ಯಯುತ ಕೆಲಸಗಳನ್ನು ಕಲಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಕ ಗಳಿಸಿರುವ ಆಧಾರದ ಮೇಲೆ ಉದ್ಯೋಗ ನೀಡುವುದಕ್ಕಿಂತ, ಕೌಶಲ್ಯದ ಆಧಾರದ ಮೇಲೆ ಯುವಕರಿಗೆ ಉದ್ಯೋಗ ನೀಡುವುದು ಒಳಿತು ಎಂದು ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

'ಯುವಕರು ದೇಶದ ಆಸ್ತಿಯಿದ್ದಂತೆ ಆದರೆ, ಬಹುತೇಕ ಕಾಲೇಜು ಹಾಗೂ ವಿವಿಗಳಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ವಿಷಾದಿಸಿದ್ದಾರೆ.

ಭಾರತವು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ, ಇದರಲ್ಲಿ ಸುಮಾರು ಅರ್ಧದಷ್ಟು ಜನರು 25ವರ್ಷದೊಳಗಿನವರೇ. ಇದೇರೀತಿ ಮುಂದುವರೆದರೆ ಮುಂದಿನ ವರ್ಷಗಳಲ್ಲಿ ದೇಶ ಬಹುದೊಡ್ಡ ಸವಾಲನ್ನು ಎದುರಿಸಲಿದೆ ಎಂದು ಎಚ್ಚರಿಸಿದ್ದಾರೆ.