ನವದೆಹಲಿ(ಆ.16): ಅಣುಬಾಂಬ್ ಬಳಕೆಯ ಕುರಿತು ಭಾರತ ಪಾಲಸಿಕೊಂಡು ಬಂದಿದ್ದ ನೋ ಫಸ್ಟ್ ಪಾಲಿಸಿ(ಮೊದಲು ಬಳಸುವುದಿಲ್ಲ)ಯನ್ನು ಪುನರ್ ಅವಲೋಕನ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

"

ರಾಜಸ್ಥಾನದ ಪೋಕ್ರಾನ್'ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಅಣುಬಂಬ್'ಗೆ ಸಂಬಂದಿಸಿದಂತೆ ಭಾರತ ಅಳವಡಿಸಿಕೊಂಡಿರುವ ನೋ ಫಸ್ಟ್ ಪಾಲಿಸಿ ನೀತಿಯನ್ನು ಪುನರ್ ಪರಿಶೀಲನೆ ಮಾಡಲಾಗವುದು ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಉದ್ಭವವಾಗುವ ಪರಿಸ್ಥಿತಿಯನ್ನು ಅವಲೋಕಿಸಿ ನೋ ಫಸ್ಟ್ ಪಾಲಿಸಿ ನೀತಿಯಲ್ಲಿ ಬದಲಾವಣೆ ತರಲಾಗುವುದು ಎಂದು ರಕ್ಷಣಾ ಸಚಿವರು ಮಾಹಿತಿ ನೀಡಿದರು. ಸದ್ಯ ಮೊದಲು ಬಳಸುವುದಿಲ್ಲ ನೀತಿಯೇ ಮುಂದುವರೆಯಲಿದ್ದು, ದೇಶದ ಭದ್ರತೆ ಮೇಲೆ ಗಂಡಾಂತರ ಎದುರಾದರೆ ಆಗ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ರಕ್ಷಣಾ ಸಚಿವರ ಈ ಘೋಷಣೆಯಿಂದ ನೆರೆಯ ಪಾಕಿಸ್ತಾನ ಹಾಗೂ ಚೀನಾಗೆ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನೆಯಾಗಿದ್ದು, 370ನೇ ವಿಧಿ ರದ್ದತಿ ವಿಚಾರದಲ್ಲಿ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನ ಇದೀಗ ಬೆವತಿದೆ.