60 ಟನ್ ಯುದ್ದ ಟ್ಯಾಂಕರ್'ಗಳ ಭಾರವನ್ನು ತೂಗುವ ಭಾರತದ ಅತೀ ದೊಡ್ಡ ಸೇತುವೆ ಡೋಲಾ-ಸಾದಿಯಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮೇ.26 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ.

ನವದೆಹಲಿ (ಮೇ.14): 60 ಟನ್ ಯುದ್ದ ಟ್ಯಾಂಕರ್'ಗಳ ಭಾರವನ್ನು ತೂಗುವ ಭಾರತದ ಅತೀ ದೊಡ್ಡ ಸೇತುವೆ ಡೋಲಾ-ಸಾದಿಯಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮೇ.26 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ.

2011 ರಲ್ಲಿ 950 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಬ್ರಹ್ಮಪುತ್ರಾ ನದಿಗೆ 9.15 ಕಿಮೀ ಉದ್ದದ ಡೋಲಾ-ಸಾದಿಯಾ ಸೇತುವೆಯನ್ನು ನಿರ್ಮಿಸಲಾಗಿದೆ. ಇದು 60 ಟನ್ ಭಾರತ ಯುದ್ಧ ಟ್ಯಾಂಕರ್ ಗಳ ಭಾರವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಈ ಸೇತುವೆ ಅಸ್ಸಾಂ ಅರುಣಾಚಲ ಪ್ರದೇಶ ನಡುವಿನ 4 ತಾಸು ಪ್ರಯಾಣವನ್ನು ತಗ್ಗಿಸಲಿದೆ. ಭದ್ರತಾ ಅಗತ್ಯಗಳನ್ನು ಹೆಚ್ಚಿಸಲು ಈ ಸೇತುವೆ ಅನುಕೂಲವಾಗಲಿದೆ ಹಾಗೂ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಜನರಿಗೆ ವಿಮಾನಯಾನ, ರೈಲ್ವೇ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.

ಈ ಸೇತುವೆ ಮುಂಬೈನ ಬಾಂದ್ರಾ-ವಾರ್ಲಿ ಸೇತುವೆಗಿಂತ 3.55 ಕಿಮೀ ಉದ್ದವಿದ್ದು ಭಾರತದ ಅತೀ ಉದ್ದದ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಈ ಪ್ರಮುಖ ಸೇತುವೆಯನ್ನು ಮೇ. 26 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ. ಈಶಾನ್ಯ ರಾಜ್ಯಗಳ ರಸ್ತೆ ಸಂಪರ್ಕವನ್ನು ಬೆಸೆಯುತ್ತದೆ. ರಕ್ಷಣಾ ದೃಷ್ಟಿಯಿಂದ ಕೂಡಾ ಅನುಕೂಲವಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ ಜನರು ಈ ಸೇತುವೆಯ ಉಪಯೋಗ ಪಡೆಯಲಿದ್ದಾರೆ ಎಂದು ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.