Asianet Suvarna News Asianet Suvarna News

ಭಾರತ ವಿಶ್ವದಲ್ಲೇ 6 ನೇ ಶ್ರೀಮಂತ ದೇಶ

ಸುಮಾರು 535 ಲಕ್ಷ ಕೋಟಿ ರು. (8,230 ಬಿಲಿಯನ್ ಡಾಲರ್) ಸಂಪತ್ತಿನೊಂದಿಗೆ ಭಾರತ  ಜಗತ್ತಿನಲ್ಲೇ  ಆರನೇ ಅತಿದೊಡ್ಡ ಶ್ರೀಮಂತ ರಾಷ್ಟ್ರ ಎನಿಸಿದೆ.

India is 6 th Richest Country in World

ನವದೆಹಲಿ (ಜ.31):  ಸುಮಾರು 535 ಲಕ್ಷ ಕೋಟಿ ರು. (8,230 ಬಿಲಿಯನ್ ಡಾಲರ್) ಸಂಪತ್ತಿನೊಂದಿಗೆ ಭಾರತ ಜಗತ್ತಿನಲ್ಲೇ ಆರನೇ ಅತಿದೊಡ್ಡ ಶ್ರೀಮಂತ ರಾಷ್ಟ್ರ ಎನಿಸಿದೆ.

‘ನ್ಯೂ ವರ್ಲ್ಡ್ ವೆಲ್ತ್’, ನಗರ ಮತ್ತು ಹಳ್ಳಿಗಳಲ್ಲಿನ ಖಾಸಗಿ ವ್ಯಕ್ತಿಗಳ ಆಸ್ತಿಯನ್ನು ಪರಿಗಣಿಸಿ ಈ ವರದಿ ತಯಾರಿಸಿದೆ. ವರದಿ ಅನ್ವಯ 2016 ರಲ್ಲಿ 427 ಲಕ್ಷ ಕೋಟಿ ರು. (6,584 ಬಿಲಿಯನ್ ಡಾಲರ್)ನಷ್ಟಿದ್ದ ಭಾರತದ ಸಂಪತ್ತು 2017 ರಲ್ಲಿ 535 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಜೊತೆಗೆ ಕಳೆದ ಒಂದು ದಶಕದಲ್ಲಿ ಭಾರತದ ಸಂಪತ್ತು ಶೇ. 160 ರಷ್ಟು ಏರಿಕೆ ಕಂಡಿದೆ. ಇನ್ನು 4,200 ಲಕ್ಷ ಕೋಟಿ ರು. (64,584 ಬಿಲಿಯನ್ ಡಾಲರ್) ಸಂಪತ್ತಿನೊಂದಿಗೆ ಅಮೆರಿಕ ಅತ್ಯಂತ ಶ್ರೀಮಂತ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. 1,612 ಲಕ್ಷ ಕೋಟಿ ರು. (24,803 ಬಿಲಿಯನ್ ಡಾಲರ್) ಸಂಪತ್ತಿನೊಂದಿಗೆ ಚೀನಾ ಎರಡನೇ ಮತ್ತು 1,268 ಲಕ್ಷ ಕೋಟಿ ರು. (19,522 ಬಿಲಿಯನ್ ಡಾಲರ್) ನೊಂದಿಗೆ  ಜಪಾನ್ ಮೂರನೇ ಸ್ಥಾನದಲ್ಲಿದೆ.  ಯುಕೆ, ಜರ್ಮನಿ ಕ್ರಮವಾಗಿ ನಾಲ್ಕನೇ

ಮತ್ತು ಐದನೇ ಸ್ಥಾನದಲ್ಲಿವೆ. ನಂತರದ ಸ್ಥಾನಗಳಲ್ಲಿ ಫ್ರಾನ್ಸ್ (7 ನೇ), ಕೆನಡಾ (8 ನೇ), ಆಸ್ಟ್ರೇಲಿಯಾ (9 ನೇ), ಇಟಲಿ (10ನೇ) ಸ್ಥಾನದಲ್ಲಿದೆ.

ಭಾರತದಲ್ಲಿ 6.5  ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿರುವ 3,30,400 ಶ್ರೀಮಂತರು ಇದ್ದಾರೆ. ಹೀಗೆ ವೈಯಕ್ತಿಕವಾಗಿ ಮಿಲಿಯನೇರ್‌ಗಳಾಗಿರುವ ವ್ಯಕ್ತಿಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಒಂಬತ್ತನೇ ಸ್ಥಾನದಲ್ಲಿದೆ.

ಭಾರತದಲ್ಲಿ ಸುಮಾರು 20, 730 ಮಂದಿ ಬಹುಕೋಟಿ ಶ್ರೀಮಂತರಿದ್ದು, ದೇಶ ಏಳನೇ ಸ್ಥಾನದಲ್ಲಿದೆ. 119 ಮಂದಿ ಬಿಲಿಯನೇರ್‌ಗಳಿದ್ದಾರೆ. ಬಿಲಿಯನೇರ್‌ಗಳ ವಿಷಯದಲ್ಲಿ ಭಾರತ ಅಮೆರಿಕ, ಚೀನಾದ ನಂತರ ಮೂರನೇ ಸ್ಥಾನದಲ್ಲಿದೆ.

 

Follow Us:
Download App:
  • android
  • ios