Asianet Suvarna News Asianet Suvarna News

ಕಳೆದ 10 ವರ್ಷಗಳಲ್ಲೇ ಭಾರತೀಯರಿಗೆ ಸಿಕ್ಕ ಶುಭ ಸುದ್ದಿ ಇದು?

ಕಳೆದ ಒಂದು ದಶಕದಲ್ಲೆ  ಭಾರತೀಯರು ಕೇಳುತ್ತಿರುವ  ಉತ್ತಮ ಶುಭ ಸುದ್ದಿ ಇದಾಗಿದೆ. ಭಾರತೀಯರ ಜೀವನ ಮಟ್ಟ ಉತ್ತಮಗೊಂಡು ಬಡತನದ ಪ್ರಮಾಣ ಇಳಿಕೆಯಾಗಿದ್ದಾಗಿ ವಿಶ್ವ ಸಂಸ್ಥೆಯ ಸಮೀಕ್ಷೆಯೊಂದು ತಿಳಿಸಿದೆ. 

India Has Made Tremendous Progress
Author
Bengaluru, First Published Sep 22, 2018, 4:02 PM IST

ನವದೆಹಲಿ : ಭಾರತದಲ್ಲಿ ಬಡತನದ ಪ್ರಮಾಣ ಇಳಿಕೆಯಾಗಿದ್ದು ಕಳೆದ ಒಂದು ದಶಕದಲ್ಲಿ ಇದೊಂದು ಭಾರತೀಯರ ಪಾಲಿಗೆ ದಕ್ಕಿದ ಗುಡ್ ನ್ಯೂಸ್ ಆಗಿದೆ. 

2005 - 06 ರಿಂದ  2015 - 16ರ ಅವಧಿಯಲ್ಲಿ  271 ಮಿಲಿಯನ್ ಜನರು  ಬಡತನ ರೇಖೆಯಿಂದ ಹೊರಕ್ಕೆ ಬಂದಿದ್ದಾರೆ. 

ಈ ಮೂಲಕ ದೇಶದ ಬಡತನ ಮಟ್ಟದಲ್ಲಿ ಇಳಿಕೆಯಾಗಿದೆ.  ಶೇ.55ರಷ್ಟು ಪ್ರಮಾಣದ ದೇಶದ ಬಡತನ ಪ್ರಮಾಣವು ಶೇ.28ಕ್ಕೆ ಕುಸಿದಿದೆ. 

ಆದರೆ ಕೆಲವೊಂದು ರಾಜ್ಯಗಳಲ್ಲಿ ಇನ್ನೂ ಕೂಡ ಹೆಚ್ಚಿನ ಬಡತನವಿದೆ. ಆದರೆ ಕೆಲವೊಂದು ರಾಜ್ಯಗಳು ಉತ್ತಮ ಮಟ್ಟದಲ್ಲಿವೆ. ಕೇರಳ ರಾಜ್ಯದ ಜೀವನ ಮಟ್ಟ ಉತ್ತಮವಾಗಿದ್ದು,  ಬಿಹಾರದಂತಹ ರಾಜ್ಯಗಳು ಇನ್ನೂ ಕೂಡ ಬಡತನದಂತಹ ಭೀಕರ ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನಲಾಗಿದೆ. 

ಈ ಬಗ್ಗೆ ವಿಶ್ವ ಸಂಸ್ಥೆ ಸಮೀಕ್ಷೆಯನ್ನು ನಡೆಸಿದ್ದು, ಈ ಮೂಲಕ ಬಡತನದ ಪ್ರಮಾಣವನ್ನು ಅಳತೆ ಮಾಡಲಾಗಿದೆ. ಸಮೀಕ್ಷೆಗೆ ಶಿಕ್ಷಣದ ಮಟ್ಟ, ಆರೋಗ್ಯ, ಜೀವನ ಮಟ್ಟವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. 

Follow Us:
Download App:
  • android
  • ios