Asianet Suvarna News Asianet Suvarna News

ಶಿಶು ಮರಣ: ಭಾರತವೇ ನಂ 1

ಉಳಿದ ದೇಶಗಳಿಗೆ ಹೋಲಿಸಿದರೆ 2015ರಲ್ಲಿ 5 ವರ್ಷದ ಒಳಗಿನ ಮಕ್ಕಳ ಸಾವಿನ ಪ್ರಮಾಣ ಭಾರತದಲ್ಲೇ ಅಧಿಕವಾಗಿದೆ. ಬಡವರು ಮತ್ತು ಶ್ರೀಮಂತರಲ್ಲಿ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಮೆರಿಕದ ಜಾನ್ಸ್‌ ಹಾಪ್ಕಿನ್ಸ್‌ ಬ್ಲೂಮ್‌ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

India had world's highest child mortality rate in 2015
Author
Bengaluru, First Published May 16, 2019, 9:42 AM IST

ವಾಷಿಂಗ್ಟನ್ (ಮೇ. 16): ಉಳಿದ ದೇಶಗಳಿಗೆ ಹೋಲಿಸಿದರೆ 2015ರಲ್ಲಿ 5 ವರ್ಷದ ಒಳಗಿನ ಮಕ್ಕಳ ಸಾವಿನ ಪ್ರಮಾಣ ಭಾರತದಲ್ಲೇ ಅಧಿಕವಾಗಿದೆ. ಬಡವರು ಮತ್ತು ಶ್ರೀಮಂತರಲ್ಲಿ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಮೆರಿಕದ ಜಾನ್ಸ್‌ ಹಾಪ್ಕಿನ್ಸ್‌ ಬ್ಲೂಮ್‌ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

ಮಕ್ಕಳ ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ಭಾರತ ಗಣನೀಯ ಪ್ರಗತಿ ದಾಖಲಿಸುತ್ತಿದೆ. 2000ನೇ ಇಸವಿಯಲ್ಲಿ 5 ವರ್ಷದ ಒಳಗಿನ 25 ಲಕ್ಷ ಮಕ್ಕಳು ಸಾವಿಗೀಡಾಗಿದ್ದಕ್ಕೆ ಹೋಲಿಸಿದರೆ 2015ರಲ್ಲಿ ಮಕ್ಕಳ ಸಾವಿನ ಪ್ರಮಾಣ 12 ಲಕ್ಷಕ್ಕೆ ಇಳಿಕೆಯಾಗಿದೆ. ಆದಾಗ್ಯೂ ಭಾರತದಲ್ಲಿ ಮಕ್ಕಳ ಸಾವಿನ ಪ್ರಮಾಣ ವಿಶ್ವದಲ್ಲೇ ಅಧಿಕೆ ಎನಿಸಿಕೊಂಡಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಭಾರತದ ರಾಜ್ಯಗಳ ಮಧ್ಯೆ ಮಕ್ಕಳ ಸಾವಿನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವಿದೆ. ಅಸ್ಸಾಂನಲ್ಲಿ ಮಕ್ಕಳ ಸಾವಿನ ಪ್ರಮಣ ಅತ್ಯಧಿಕವಾಗಿದ್ದು, ಗೋವಾಕ್ಕಿಂತಲೂ ಏಳು ಪಟ್ಟು ಅಧಿಕವೆನಿಸಿದೆ. ಪ್ರಸವ ಪೂರ್ವದಲ್ಲಿ ಉಂಟಾಗುವ ಸಮಸ್ಯೆ, ತಡೆಗಟ್ಟಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಂದ 5 ವರ್ಷದ ಒಳಗಿನ ಹೆಚ್ಚಿನ ಮಕ್ಕಳು ಸಾವಿಗೀಡಾಗುತ್ತಿದ್ದಾರೆ.

ವಿಶ್ವಸಂಸ್ಥೆ ನಿಗದಿ ಪಡಿಸಿರುವ ಗುರಿಯ ಪ್ರಕಾರ ಭಾರತ 5 ವರ್ಷದ ಒಳಗಿನ ಮಕ್ಕಳ ಸಾವಿನ ಸಂಖ್ಯೆಯನ್ನು 1,000ಕ್ಕೆ 39ರ ಒಳಗೆ ನಿಯಂತ್ರಿಸಬೇಕಿದೆ. ಆದರೆ, 2015ರಲ್ಲಿ 1,000ಕ್ಕೆ 47.8 ಸಾವುಗಳು ಸಂಭವಿಸಿವೆ. ಬಹುತೇಕ ಮಕ್ಕಳು ಮೊದಲ 4 ವಾರಗಳ ಒಳಗಾಗಿಯೇ ಸಾವನ್ನಪ್ಪಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 

Follow Us:
Download App:
  • android
  • ios