ಮದ್ಯ ಸೇವನೆ – ಯುವತಿಯರಿಂದ ಮತಾಂತರಕ್ಕೆ ಸೆಳೆಯುವ ಹುನ್ನಾರ

First Published 25, Feb 2018, 7:17 PM IST
India Had Conversion Problem Says Swamiji
Highlights

ಮದ್ಯ ಸೇವನೆ ಹಾಗೂ ಯುವತಿಯರ ಜೊತೆ ಕುಣಿಯಲು ಅವಕಾಶ ಕಲ್ಪಿಸುವ ಮೂಲಕ ಮತಾಂತರ ಪ್ರಕ್ರಿಯೆಗೆ ಸೆಳೆಯುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ ಎಂದು ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಬೆಳಗಾವಿ : ಮದ್ಯ ಸೇವನೆ ಹಾಗೂ ಯುವತಿಯರ ಜೊತೆ ಕುಣಿಯಲು ಅವಕಾಶ ಕಲ್ಪಿಸುವ ಮೂಲಕ ಮತಾಂತರ ಪ್ರಕ್ರಿಯೆಗೆ ಸೆಳೆಯುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ ಎಂದು ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ನಗರದ ಜಿರಗೆ ಸಭಾಭವನದಲ್ಲಿ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಮಾತನಾಡುತ್ತಾ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದ ಕನ್ನೇರಿ ಸಿದ್ಧಗಿರಿ ಮಠದ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ. ಕೆಲವು ಯುವಕರು ಮದ್ಯ ಸೇವನೆ ಹಾಗೂ ಯುವತಿಯರ ಜೊತೆ ಕುಣಿಯುವುದಕ್ಕಾಗಿ ಚರ್ಚ್’ಗೆ ಹೋಗುತ್ತಿದ್ದಾರೆ.

ಒಂದು ವೇಳೆ ಈ ಯುವತಿಯರಿಗೆ ಮಾರು ಹೋದ ಯುವಕರಿಗೆ ಕಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಮದುವೆ ಅವಕಾಶ ಎನ್ನುವಂತಾಗಿದೆ. ಬ್ರಾಹ್ಮಣರು, ಲಿಂಗಾಯತ ಸಮುದಾಯದಲ್ಲಿಯೂ ಮತಾಂತರ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ಬೆಳಗಾವಿಯ ವಿಶ್ವ ಹಿಂದೂ ಪರಿಷತ್ ವತಿಯಿಂದ  ಹಿಂದೂ ಸಭೆ ಆರಂಭವಾಗಿದ್ದು, ಇಲ್ಲಿನ ಲಿಂಗರಾಜು ಕಾಲೇಜು ಮೈದಾನದಲ್ಲಿ ನಡೆಸಲಾಗುತ್ತಿದೆ. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತಿದೆ. ನೂರಕ್ಕೂ ಅಧಿಕ ಸ್ವಾಮೀಜಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

loader