ಫರ್ಜಾದ್-ಬಿ(Farzad-B) ಗ್ಯಾಸ್ ಫೀಲ್ಡ್'ನಲ್ಲಿ 19 ಟ್ರಿಲಿಯನ್ ಕ್ಯೂಬಿಕ್ ಫೀಟ್, ಅಂದರೆ ಸುಮಾರು 1.9 ಲಕ್ಷ ಕೋಟಿ ಘನ ಅಡಿಯಷ್ಟು ನೈಸರ್ಗಿಕ ಅನಿಲ ನಿಕ್ಷೇಪವಿರುವ ಅಂದಾಜಿದೆ. ಆರ್ಥಿಕವಾಗಿ ಬೆಳೆಯುತ್ತಿರುವ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿಪರೀತ ಬೇಡಿಕೆ ಇದೆ. ಎಲ್'ಎನ್'ಜಿಯನ್ನು ಅತೀ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತಕ್ಕೆ 4ನೇ ಸ್ಥಾನವಿದೆ.

ನವದೆಹಲಿ(ಜುಲೈ 03): ಪೆಟ್ರೋಲಿಯಮ್ ಉತ್ಪನ್ನಗಳಿಗೆ ವಿಪರೀತ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಇರಾನ್ ದೇಶದ ಫರ್ಜಾದ್-ಬಿ ಅನಿಲ ನಿಕ್ಷೇಪಕ್ಕಾಗಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಲ ಭಾರತ ನಿರ್ಧರಿಸಿದೆ. ಫರ್ಜಾದ್-ಬಿಯಲ್ಲಿ ನ್ಯಾಚುರಲ್ ಗ್ಯಾಸ್ ಫೀಲ್ಡ್'ನ ಅಭಿವೃದ್ಧಿ ಮತ್ತು ಇಂಧನ ತಯಾರಿಕೆಯ ಅಗತ್ಯ ಸೌಕರ್ಯ ನಿರ್ಮಾಣಕ್ಕಾಗಿ ಭಾರತೀಯ ಪೆಟ್ರೋಲಿಯಮ್ ಕಂಪನಿಗಳು ಒಟ್ಟಾರೆ 11 ಬಿಲಿಯನ್ ಡಾಲರ್, ಅಂದರೆ, ಸುಮಾರು 72 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಿದ್ಧವಿವೆ. ಆದರೆ, ಇರಾನ್ ದೇಶದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 2009ರಿಂದಲೂ ಭಾರತವು ಫರ್ಜಾದ್-ಬಿ ನಿಕ್ಷೇಪದ ಯೋಜನೆ ಪಡೆಯಲು ಕಸರತ್ತು ನಡೆಸುತ್ತಿದೆ. ಹೂಡಿದ ಬಂಡವಾಳಕ್ಕೆ 18% ರಿಟರ್ನ್ ಬಂದರೆ ಸಾಕು ಎಂಬುದಷ್ಟೇ ಭಾರತೀಯ ತೈಲ ಕಂಪನಿಗಳ ಬೇಡಿಕೆಯಾಗಿದೆ. ಬೇಕಿದ್ದರೆ ಅದರಿಂದ ಉತ್ಪನ್ನವಾಗುವ ಎಲ್ಲಾ ತೈಲವನ್ನೂ ತಾವೇ ಕೊಂಡುಕೊಳ್ಳುತ್ತೇವೆ. ಇರಾನ್ ದೇಶಕ್ಕೆ ತಾವು ಇದಕ್ಕಿಂತ ಹೆಚ್ಚಿನ ಆಫರ್ ಕೊಡಲು ಸಾಧ್ಯವಿಲ್ಲ ಎಂದು ಭಾರತೀಯ ತೈಲ ಕಂಪನಿಗಳ ಸಮೂಹವು ಹೇಳಿದೆ. ಒಎನ್'ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಶನ್, ಆಯಿಲ್ ಇಂಡಿಯಾ ಲಿ. ಮೊದಲಾದ ಕಂಪನಿಗಳು ಈ ಕನ್ಸಾರ್ಟಿಯಮ್'ನಲ್ಲಿವೆ.

ಫರ್ಜಾದ್-ಬಿ(Farzad-B) ಗ್ಯಾಸ್ ಫೀಲ್ಡ್'ನಲ್ಲಿ 19 ಟ್ರಿಲಿಯನ್ ಕ್ಯೂಬಿಕ್ ಫೀಟ್, ಅಂದರೆ ಸುಮಾರು 1.9 ಲಕ್ಷ ಕೋಟಿ ಘನ ಅಡಿಯಷ್ಟು ನೈಸರ್ಗಿಕ ಅನಿಲ ನಿಕ್ಷೇಪವಿರುವ ಅಂದಾಜಿದೆ. ಆರ್ಥಿಕವಾಗಿ ಬೆಳೆಯುತ್ತಿರುವ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿಪರೀತ ಬೇಡಿಕೆ ಇದೆ. ಎಲ್'ಎನ್'ಜಿಯನ್ನು ಅತೀ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತಕ್ಕೆ 4ನೇ ಸ್ಥಾನವಿದೆ.

ಇನ್ನು, ಇರಾನ್'ನಲ್ಲಿ ಫರ್ಜಾದ್-ಬಿ ಗಿಂತಲೂ ದೊಡ್ಡದಾದ ತೈಲ ನಿಕ್ಷೇಪಗಳಿವೆ. ಇಲ್ಲಿರುವ ಸೌಥ್ ಪಾರ್ಸ್ ವಿಶ್ವದ ಅತೀದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವಾಗಿದೆ. ಈ ಯೋಜನೆಯು ಫ್ರಾನ್ಸ್'ನ ಟೋಟಲ್ ಎಸ್'ಎ ಮತ್ತು ಚೀನಾದ ಸಿಎನ್'ಪಿಸಿ ಸಂಸ್ಥೆಗಳ ಪಾಲಾಗುವ ಸಾಧ್ಯತೆ ಇದೆ.