ಈ ಮೂಲಕ 2016-17ನೇ ಸಾಲಿನಲ್ಲಿ ಶೇ.7.1ರಷ್ಟು ಜಿಡಿಪಿ ಪ್ರಗತಿ ದರ ದಾಖಲಿಸಿದಂತೆ ಆಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಆರ್ಥಿಕ ಪ್ರಗತಿ ದರವಾಗಿದೆ.

ನವದೆಹಲಿ: ಕೇಂದ್ರ ಸರ್ಕಾರದ ಅಪನಗದೀಕ ರಣ ನೀತಿ ದೇಶದ ಆರ್ಥಿಕತೆಗೆ ಹೊಡೆತ ನೀಡಿರುವುದು ಖಚಿತವಾಗಿದೆ. ಮಾರ್ಚ್'ಗೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ.6.1ರಷ್ಟು ದಾಖಲಾಗಿದೆ.

ಈ ಮೂಲಕ 2016-17ನೇ ಸಾಲಿನಲ್ಲಿ ಶೇ.7.1ರಷ್ಟು ಜಿಡಿಪಿ ಪ್ರಗತಿ ದರ ದಾಖಲಿಸಿದಂತೆ ಆಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಆರ್ಥಿಕ ಪ್ರಗತಿ ದರವಾಗಿದೆ.

ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ಭಾರತ ಕಳೆದುಕೊಂಡಿದೆ. ಈ ಹಿರಿಮೆ ಇದೀಗ ಚೀನಾಕ್ಕೆ ಸಂದಿದೆ.