ನಿನ್ನೆ ಸಂಜೆ ಫಾಲಿ ನಾರಿಮನ್ ಅವರನ್ನು ಭೇಟಿಯಾಗಲು ಕರ್ನಾಟಕ ಭವನದಿಂದ ಹೊರಗೆ ಹೊರಟಿದ್ದ ಎಂಬಿ ಪಾಟೀಲರಿಗೆ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಸಿ ವಾಪಸ್ ಬರುತ್ತಿದ್ದ ಸೋಮಣ್ಣ ಹಾಗೂ ಬಸವರಾಜ್ ಬೊಮ್ಮಾಯಿ ಸಿಕ್ಕರು. ಸೋಮಣ್ಣ ಎದುರಿಗಿದ್ದರೂ ಮಾತನಾಡಿಸದ ಪಾಟೀಲರು ಬೊಮ್ಮಾಯಿ ಅವರಿಗೆ ಮಾತ್ರ ಬರ್ರೀ ನಾರಿಮನ್ ಕಡೆ ಹೋಗೋಣ ಎಂದು ಹೇಳಿದರು.

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

Add Asianetnews Kannada as a Preferred SourcegooglePreferred

ನಿನ್ನೆ ಸಂಜೆ ಫಾಲಿ ನಾರಿಮನ್ ಅವರನ್ನು ಭೇಟಿಯಾಗಲು ಕರ್ನಾಟಕ ಭವನದಿಂದ ಹೊರಗೆ ಹೊರಟಿದ್ದ ಎಂಬಿ ಪಾಟೀಲರಿಗೆ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಸಿ ವಾಪಸ್ ಬರುತ್ತಿದ್ದ ಸೋಮಣ್ಣ ಹಾಗೂ ಬಸವರಾಜ್ ಬೊಮ್ಮಾಯಿ ಸಿಕ್ಕರು. ಸೋಮಣ್ಣ ಎದುರಿಗಿದ್ದರೂ ಮಾತನಾಡಿಸದ ಪಾಟೀಲರು ಬೊಮ್ಮಾಯಿ ಅವರಿಗೆ ಮಾತ್ರ ಬರ್ರೀ ನಾರಿಮನ್ ಕಡೆ ಹೋಗೋಣ ಎಂದು ಹೇಳಿದರು. ಬೊಮ್ಮಾಯಿ ಇಲ್ಲ ಇಲ್ಲ ಎಂದಾಗ ಪಕ್ಕದಲ್ಲಿಯೇ ಇದ್ದ ಬಿಜೆಪಿ ನಾಯಕರೊಬ್ಬರು ಎಲ್ಲವೂ ಸರಿಯಾದರೆ ಮುಂದಿನ ಜೂನ್ ನಂತರ ಬೊಮ್ಮಾಯಿ ಅವರೇ ಜಲ ಸಂಪನ್ಮೂಲ ಸಚಿವರಾಗಿ ನಾರಿಮನ್ ಭೇಟಿಗೆ ಹೋಗುತ್ತಾರೆ ಎಂದರು. ಆಗ ಪಾಟೀಲರು ಜೋರಾಗಿ ಇಲ್ಲ ಇಲ್ಲ ಸಾಧ್ಯವೇ ಇಲ್ಲ, ನಾವೇ ಗೆಲ್ಲೋದು ಎನ್ನಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಬೊಮ್ಮಾಯಿ ಏನೋ ಹೇಳಲಾರಂಭಿಸಿದರು. ಒಂದು ರೀತಿಯಲ್ಲಿ ವಾದ ಪ್ರತಿವಾದ ಜೋರಾಗಿ ಆರಂಭವಾದಂತೆ ಕೇಳಿಸತೊಡಗಿತು. ಕೊನೆಗೆ ಲಕ್ಷ್ಮಣ್ ಸವದಿ ಏನೋ ಜೋಕ್ ಹೇಳಿದ ನಂತರ ಬೊಮ್ಮಾಯಿ ಪಾಟೀಲರನ್ನು ಅಪ್ಪಿಕೊಂಡು ಬೀಳ್ಕೊಟ್ಟರು. ಜೊತೆಗೆ ಮಾತುಮಾತಿಗೆ ರೈಸ್ ಆಗಬೇಡ್ರಿ ಎಂದು ಎಷ್ಟು ಸಲ ಹೇಳಿದ್ದೇನೆ ಎಂದು ಕೂಡ ಚುಚ್ಚಿದರು.

(ಈ ಲೇಖನದ ಪೂರ್ಣ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ)

- ಪ್ರಶಾಂತ್ ನಾತು, ಸುವರ್ಣ ನ್ಯೂಸ್