Asianet Suvarna News Asianet Suvarna News

ಕನ್ನಡಿಗನ ಬಳಿ ಅತೀ ಹೆಚ್ಚು ಸಲಹೆ ಕೇಳುವ ಮೋದಿ: ಇವರು ಉಗ್ರಪ್ಪ, ಸಿಂಧ್ಯಾ ಸಹವರ್ತಿಗಳು

ಮೋದಿ ಇರಲಿ ಅಮಿತ್ಶಾ ಇರಲಿ ಯಾವುದೇ ಕ್ಲಿಷ್ಟವಿಷಯದ ಬಗ್ಗೆ ಸಂಘದ ಸಲಹೆ ಬೇಕೆಂದರೆ  ಇವರ ಸಲಹೆ ಕೇಳುತ್ತಾರೆ

India gate column point
  • Facebook
  • Twitter
  • Whatsapp

ದೆಹಲಿಯಲ್ಲಿ ಮೋದಿ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಪ್ರಭಾವ ಇರುವ ಕನ್ನಡಿಗ ಎಂದರೆ ಅದು ಆರ್‌ಎಸ್‌ಎಸ್‌ ಸಹ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ. ಮೋದಿ ಇರಲಿ ಅಮಿತ್‌ ಶಾ ಇರಲಿ ಯಾವುದೇ ಕ್ಲಿಷ್ಟವಿಷಯದ ಬಗ್ಗೆ ಸಂಘದ ಸಲಹೆ ಬೇಕೆಂದರೆ ಮೋಹನ್‌ ಭಾಗವತ್‌ ನಂತರ ದತ್ತಾತ್ರೇಯ ಹೊಸಬಾಳೆ ಅವರಿಗೆ ಫೋನಾ​ಯಿ​ಸುತ್ತಾರೆ. ಶಿವಮೊಗ್ಗ ಜಿಲ್ಲೆಯ ಸೊರಬದವರಾದ ದತ್ತಾತ್ರೇಯ ಹೊಸಬಾಳೆ ತುರ್ತು ಪರಿಸ್ಥಿತಿ ದಿನಗಳಲ್ಲಿಯೇ ಸಂಘದ ಪ್ರಚಾರಕರಾದವರು. ಹೊಸಬಾಳೆ ಬಗ್ಗೆ ಬಿಜೆಪಿ ಉನ್ನತ ವಲಯದಲ್ಲಿ ಅತ್ಯಂತ ಹೆಚ್ಚಿನ ಗೌರವವಿದೆ. ಚಡ್ಡಿಧಾರಿ ಸಂಘವನ್ನು ಪ್ಯಾಂಟ್‌ ಯುಗಕ್ಕೆ ತಂದವರಲ್ಲಿ ಹೊಸಬಾಳೆ ಕೂಡ ಒಬ್ಬರು ಎಂದು ಹೇಳಲಾಗು​ತ್ತಿದೆ. ಕುತೂಹಲವೆಂದರೆ ಉಗ್ರಪ್ಪ, ಪಿ.ಜಿ.ಆರ್‌. ಸಿಂಧ್ಯಾ ಮತ್ತು ದತ್ತಾತ್ರೇಯ ಹೊಸಬಾಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಜೊತೆಗಾರರಾಗಿ ಕೆಲಸ ಮಾಡಿದವರಂತೆ.

(ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)

Follow Us:
Download App:
  • android
  • ios