ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಗಾಳ..!

news | Tuesday, January 16th, 2018
Prashanth Nathu
Highlights

ಬಹುತೇಕ ಸರ್ವೇಗಳು ಅತಂತ್ರ ವಿಧಾನಸಭೆ ಆಗಬಹುದು ಎಂದು ಹೇಳುತ್ತಿದ್ದಂತೆ, ಕಾಂಗ್ರೆಸ್ ಹೈಕಮಾಂಡ್ ಗೆಲ್ಲುವ ಅಭ್ಯರ್ಥಿಗೆ ಗಾಳ ಹಾಕಿ ಕರೆದುಕೊಂಡು ಬನ್ನಿ, ಟಿಕೆಟ್ ಕೊಡೋಣ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಹೇಳಿದೆಯಂತೆ.

ಬೆಂಗಳೂರು (ಜ.16): ಬಹುತೇಕ ಸರ್ವೇಗಳು ಅತಂತ್ರ ವಿಧಾನಸಭೆ ಆಗಬಹುದು ಎಂದು ಹೇಳುತ್ತಿದ್ದಂತೆ, ಕಾಂಗ್ರೆಸ್ ಹೈಕಮಾಂಡ್ ಗೆಲ್ಲುವ ಅಭ್ಯರ್ಥಿಗೆ ಗಾಳ ಹಾಕಿ ಕರೆದುಕೊಂಡು ಬನ್ನಿ, ಟಿಕೆಟ್ ಕೊಡೋಣ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಹೇಳಿದೆಯಂತೆ.

ಯಾವುದೇ ಪಕ್ಷದಿಂದ ನಿಂತರೂ ಗೆಲ್ಲುವ ಅಭ್ಯರ್ಥಿಯನ್ನು ಕರೆದು ಕೊಂಡು ಬಂದರೆ - ಒಂದು: ವಿಪಕ್ಷಗಳ ಸಂಖ್ಯೆ ಕಡಿಮೆ ಮಾಡಬಹುದು. ಎರಡು: ಅತಂತ್ರದಿಂದ ನೂರರ ಹತ್ತಿರ ಹತ್ತಿರ ಹೋಗಬಹುದು. ಕೂಡ್ಲಿಗಿ ನಾಗೇಂದ್ರ ಈಗಾಗಲೇ ಬರಲು ತಯಾರಾಗಿದ್ದು, ಆನಂದ್ ಸಿಂಗ್ ಪಕ್ಷೇತರವಾಗಿ ನಿಲ್ಲಬೇಕೋ ಕಾಂಗ್ರೆಸ್‌ಗೆ ಬರಬೇಕೋ ಇನ್ನೂ ತೀರ್ಮಾನ ಮಾಡಿಲ್ಲವಂತೆ.

ಕಾಂಗ್ರೆಸ್ ನಾಯಕರು ಹೇಳುವ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಒಂದಿಷ್ಟು ಸಂಚಲನ ಆಗಬಹುದು, ಹೇಳುತ್ತೇವೆ ಕಾಯಿರಿ ಎನ್ನುತ್ತಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಕೊನೆಯ ಒಂದು ತಿಂಗಳು ಅಮಿತ್ ಶಾ ಕೂಡ ಇದನ್ನೇ ಮಾಡಬಹುದು ಎಂಬ ಆತಂಕ ಕೂಡ ಇದ್ದೇ ಇದೆ. ಅತಂತ್ರದಿಂದ ಬಹುಮತದತ್ತ ದಾಪುಗಾಲು ಎಂದು ಪಕ್ಷಗಳು ಹೇಳುವುದೆಂದರೆ ಹೊಸ  ಮೀನುಗಳಿಗೆ ಗಾಳ ಹಾಕುವುದೇ ಇರಬೇಕು.

Comments 0
Add Comment

    ರಿಸ್ಕ್ ಡಿಕೆಶಿಗೆ ಖಡಕ್ ವಾರ್ನಿಂಗ್ : ಶ್ಲಾಘನೆ ನಂತರ ಎಚ್ಚರಿಕೆ

    karnataka-assembly-election-2018 | Thursday, May 24th, 2018