ತಮ್ಮದೇ ಸೂಚನೆಯ ಮೇಲೆ ಹೋರಾಟಕ್ಕೆ ಧುಮುಕಿದ್ದ ಎಂ.ಬಿ  ಪಾಟೀಲ್ ಮತ್ತವರ ಜೊತೆಗಾರರ ಮಾತು ಕೇಳಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಪ್ರತ್ಯೇಕ ಧರ್ಮಕ್ಕೆ ಅಸ್ತು ಎಂದಿದ್ದಾರಾದರೂದೆಹಲಿ ಹೈಕಮಾಂಡ್ ನಾಯಕರು ಮಾತ್ರ ಸ್ವಲ್ಪ ಕಸಿವಿಸಿಗೊಂಡಿರುವುದು ನಿಜ.

ನವದೆಹಲಿ (ಮಾ. 20): ತಮ್ಮದೇ ಸೂಚನೆಯ ಮೇಲೆ ಹೋರಾಟಕ್ಕೆ ಧುಮುಕಿದ್ದ ಎಂ.ಬಿ ಪಾಟೀಲ್ ಮತ್ತವರ ಜೊತೆಗಾರರ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಧರ್ಮಕ್ಕೆ ಅಸ್ತು ಎಂದಿದ್ದಾರಾದರೂ
ದೆಹಲಿ ಹೈಕಮಾಂಡ್ ನಾಯಕರು ಮಾತ್ರ ಸ್ವಲ್ಪ ಕಸಿವಿಸಿಗೊಂಡಿರುವುದು ನಿಜ.

ಬಿಜೆಪಿ ದಲಿತ ಮತಬ್ಯಾಂಕ್ ಒಡೆಯಲು ಯತ್ನಿಸಿದಂತೆ ತಾವೂ ಬಿಜೆಪಿಯ ಲಿಂಗಾಯತ ವೋಟ್'ಬ್ಯಾಂಕ್ ಒಡೆದರೆ ಕಾಂಗ್ರೆಸ್ ಗೆಲ್ಲೋದು ಸುಲಭ ಎಂಬ ತರ್ಕವನ್ನು ಮುಂದಿಟ್ಟಿರುವ ರಾಜ್ಯದ ಕೆಲ ಕೈ ನಾಯಕರು, ರಾಹುಲ್‌'ರನ್ನು ಒಪ್ಪಿಸಿರುವುದೂ ನಿಜ. ಆದರೆ ಗುಜರಾತ್‌ನಲ್ಲಿ ಪಟೇಲರಿಗೆ ಮೀಸಲಾತಿ ಕೊಡಲು ಹೋಗಿ ಉಳಿದವರ ವಿರುದ್ಧ ನಿಂತು ಗೆಲ್ಲುವ ಪಂದ್ಯ ಸೋಲುವ ಹಾಗೆ ಆಯಿತು. ಈಗ ಕರ್ನಾಟಕದಲ್ಲೂ ಆಗಬಾರದು ಎಂದು ರಾಹುಲ್ ಹೇಳಿ ಕಳುಹಿಸಿದ್ದಾರೆ. ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆ, ಟಿ.ಬಿ ಜಯಚಂದ್ರ, ಶಾಮನೂರು ಶಿವಶಂಕರಪ್ಪ, ಎಚ್.ಕೆ ಪಾಟೀಲ್, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್ ಎಲ್ಲರೂ ಹೋಗಿ ರಾಹುಲ್ ಬಳಿ ಧರ್ಮ ಒಡೆದರೆ ರಾಜಕೀಯ ಲಾಭ ಆಗೋದಿಲ್ಲ ಎಂದು ಹೇಳಿದ್ದಾರೆ. ಆದರೂ, ಸಿಎಂ ಸಿದ್ದು ಮಾತ್ರ ಈಗ ಹಿಂದೆ ಸರಿದರೆ ಇನ್ನೂ ದೊಡ್ಡ ನಷ್ಟವಾಗಬಹುದು ಎಂದು ಹೇಳಿ ಚುನಾವಣಾ ಲಾಭದ ಗಂಟು ತೋರಿಸಿ ‘ಎಸ್’ ಅನ್ನಿಸಿದ್ದಾರೆ.

-ಪ್ರಶಾಂತ್ ನಾತು

ರಾಜಕಾರಣದ ಕುತೂಹಲಕಾರಿ ಮಾಹಿತಿಗೆ ಇಂಡಿಯಾ ಗೇಟ್  ಕ್ಲಿಕ್ ಮಾಡಿ.