ಸಾರ್ವಜನಿಕ & ಖಾಸಗಿ ಸಹಭಾಗಿತ್ವದಲ್ಲಿ (PPP). ಮಧ್ಯಪ್ರದೇಶದ ಭೋಪಾಲ್’ನ ಹೊರವಲಯದಲ್ಲಿರುವ ಹಬೀಬ್’ಗಂಜ್ ರೈಲ್ವೇ ಸ್ಟೇಶನನ್ನು ಪುನರ್ನವೀಕರಣ ಮಾಡಲಾಗುತ್ತಿದೆ. ಈ ಖಾಸಗಿ ರೈಲ್ವೇ ಸ್ಟೇಶನ್’ನಲ್ಲಿ ವಾಣಿಜ್ಯ ಸಂಕೀರ್ಣಗಳು, ಕಚೇರಿಗಳು, 5 ಸ್ಟಾರ್ ಹೋಟೆಲ್ ಹಾಗೂ ಮತ್ತಿತರ ಸೌಲಭ್ಯಗಳು ಲಭ್ಯವಾಗಲಿವೆ.
ಭೋಪಾಲ್: ಯೋಜನೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಮುಂದಿನ ಮೂರು ವರ್ಷಗಳಲ್ಲಿ ದೇಶದ ಮೊಟ್ಟಮೊದಲ ಖಾಸಗಿ ರೈಲ್ವೇ ಸ್ಟೇಶನ್ ಸಿದ್ಧವಾಗಲಿದೆ. ಸಾರ್ವಜನಿಕ & ಖಾಸಗಿ ಸಹಭಾಗಿತ್ವದಲ್ಲಿ (PPP). ಮಧ್ಯಪ್ರದೇಶದ ಭೋಪಾಲ್’ನ ಹೊರವಲಯದಲ್ಲಿರುವ ಹಬೀಬ್’ಗಂಜ್ ರೈಲ್ವೇ ಸ್ಟೇಶನನ್ನು ಪುನರ್ನವೀಕರಣ ಮಾಡಲಾಗುತ್ತಿದೆ.
ಈ ಖಾಸಗಿ ರೈಲ್ವೇ ಸ್ಟೇಶನ್’ನಲ್ಲಿ ವಾಣಿಜ್ಯ ಸಂಕೀರ್ಣಗಳು, ಕಚೇರಿಗಳು, 5 ಸ್ಟಾರ್ ಹೋಟೆಲ್ ಹಾಗೂ ಮತ್ತಿತರ ಸೌಲಭ್ಯಗಳು ಲಭ್ಯವಾಗಲಿವೆ. ಸ್ಟೇಶನ್’ನ ನಿರ್ವಹಣೆಯನ್ನು 8 ವರ್ಷಗಳ ಅವಧಿಗೆ ಬನ್ಸಲ್ ಎಂಬ ಸಂಸ್ಥೆಗೆ ವಹಿಸಲಾಗಿದ್ದು, 45 ವರ್ಷಗಳ ಮಟ್ಟಿಗೆ ಜಮೀನನ್ನು ಭೋಗ್ಯಕ್ಕೆ ನೀಡಲಾಗಿದೆ.
1979ರಲ್ಲಿ ಆರಂಭಿಸಲಾದ ಈ ಸ್ಟೇಶನ್’ನ ಅಭಿವೃದ್ಧಿಗೆ ಬನ್ಸಲ್ ಗ್ರೂಪ್ ರೂ.100 ಕೋಟಿ, ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ರೂ.350 ಕೋಟಿ ಹಣ ಹೂಡಲಿದೆ ಎಂದು ಹೇಳಲಾಗಿದೆ.
ರೈಲು ನಿಲ್ದಾಣವನ್ನು ವಿಶ್ವದರ್ಜೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಲ್ಲದೇ, ಮರು ನಿರ್ಮಾಣದ ಎರಡನೇ ಹಂತದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 5-ಸ್ಟಾರ್ ಹೋಟೆಲ್ ಕೂಡಾ ನಿರ್ಮಾಣವಾಗಲಿದೆ. ರೈಲು ನಿಲ್ದಾಣದಲ್ಲಿ ಎಲ್ಲಾ ಆಧುನಿಕ ಸೌಕರ್ಯಗಳೊಂದಿಗೆ, ಆಗಮಿಸುವ ಹಾಗೂ ಹೊರಡುವ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆಗಳಿರುವಂತೆ ವಿನ್ಯಾಸಗೊಳಿಸಲಾಗಿದೆ,
ರೈಲ್ವೇ ಸ್ಟೇಶನ್’ನಲ್ಲಿ 6 ಲಿಫ್ಟ್’ಗಳು, 11 ಎಸ್ಕಲೇಟರ್’ಗಳು, 3 ಟ್ರಾವಲೇಟರ್’ಗಳು, 2 ಅಂಡರ್’ಪಾಸ್’ಗಳಳಿರುವುವು. ಹಾಗೂ 300 ಕಾರುಗಳು, 850 ದ್ವಿಚಕ್ರವಾಹನಗಳಿಗೆ ಪಾರಕಿಂಗ್ ವ್ಯವಸ್ಥೆಯಿರುವುದು.
ಮಾ.1, 2017ರಿಂದ ಸ್ಟೇಶನ್’ನ ನಿರ್ವಹಣೆಯನ್ನು ಬನ್ಸಲ್ ಸಂಸ್ಥೆಗೆ ವಹಿಸಲಾಗಿದೆ.ಸ್ಟೇಶನ್’ನ ಫುಡ್ ಸ್ಟಾಲ್’ಗಳು, ವಿಶ್ರಾಂತಿ ಕೊಠಡಿಗಳು, ವಿದ್ಯುತ್ ವ್ಯವಸ್ಥೆ, ಹಾಗೂ ಪ್ಲಾಟ್’ಫಾರ್ಮಗಳನ್ನು ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಸ್ಥೆಯೇ ನಿರ್ವಹಿಸುತ್ತಿದೆ. ಮುಂಬರುವ ಜೂ.9ರಂದು ಈ ಪ್ರಾಜೆಕ್ಟ್’ಗೆ ರೈಲ್ವೇ ಸಚಿವ ಸುರೇಶ್ ಪ್ರಭು ಶಿಲಾನ್ಯಾಸ ಮಾಡಲಿದ್ದಾರೆ.
