ನವದೆಹಲಿ(ಫೆ.09): ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ಚೀನಾ ಸಮಾಧಾನ ವ್ಯಕ್ತಪಡಿಸಿದೆ. ಇದಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅಸಾಧಾರಣ ಭಾಗ ಎಂದು ಪ್ರತ್ಯುತ್ತರ ನೀಡಿದೆ.

ಅರುಣಾಚಲ ಪ್ರದೇಶದ ಭಾರತದ ಅವಿಭಾಜ್ಯ ಅಂಗ ಮತ್ತು ಅಸಾಧಾರಣ ಪ್ರದೇಶವಾಗಿದ್ದು, ನಮ್ಮ ದೇಶದ ನಾಯಕರು, ಭಾರತದ ಇತರೆ ಭಾಗಗಳಿಗೆ ಭೇಟಿ ನೀಡಿದ ಮಾದರಿಯಲ್ಲೇ ಗಡಿ ಭಾಗಕ್ಕೂ ಭೇಟಿ ನೀಡುತ್ತಾರೆ. ಇದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರಧಾನಿ ಮೋದಿ ಇಂದು ಅರುಣಾಚಲ ಪ್ರದೇಶದಲ್ಲಿ ಯೋಜಿಸಲಾದ ಸುಮಾರು 4 ಸಾವಿರ ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 

ಆದರೆ ಉಭಯ ದೇಶಗಳ ಗಡಿ ಸಮಸ್ಯೆ ಇರುವ ಭಾಗದಲ್ಲಿ ಭಾರತದ ರಾಜಕೀಯ ನಾಯಕರ ಚಟುವಟಿಕೆಗಳು ಸರಿಯಲ್ಲ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು.