'ನಮ್ಮ ವಾಯುಸೇನೆಯ ಯೋಧರಿಗೆ ಹಾಗೂ ಅವರ ಕುಟುಂಬಕ್ಕೆ ವಾಯುಸೇನಾ ದಿನಾಚರಣೆಯ ಶುಭಾಶಯಗಳು. ತಮ್ಮ ಧೈರ್ಯ-ಸಾಹಸದ ಮೂಲಕ ನಮ್ಮ ಆಕಾಶವನ್ನು ಕಾಪಾಡುವ ನಿಮ್ಮ ಕಾರ್ಯವು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಅ.08): ಇಂದು ಭಾರತೀಯ ವಾಯುಸೇನೆ 84ನೇ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಯುಸೇನೆಯ ಯೋಧರಿಗೆ ಹಾಗೂ ಅವರ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Add Asianetnews Kannada as a Preferred SourcegooglePreferred

'ನಮ್ಮ ವಾಯುಸೇನೆಯ ಯೋಧರಿಗೆ ಹಾಗೂ ಅವರ ಕುಟುಂಬಕ್ಕೆ ವಾಯುಸೇನಾ ದಿನಾಚರಣೆಯ ಶುಭಾಶಯಗಳು. ತಮ್ಮ ಧೈರ್ಯ-ಸಾಹಸದ ಮೂಲಕ ನಮ್ಮ ಆಕಾಶವನ್ನು ಕಾಪಾಡುವ ನಿಮ್ಮ ಕಾರ್ಯವು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ರಕ್ಷಣಾಸಚಿವ ಮನೋಹರ್ ಪರಿಕರ್ ಕೂಡ ವಾಯುಸೇನಾ ಸಿಬ್ಬಂಧಿಗಳಿಗೆ ಶುಭ ಕೋರಿದ್ದಾರೆ.

ಘಾಜಿಯಾಬಾದ್'ನ ಹಿಂಡೋನ್ ವಾಯುನೆಲೆಯಲ್ಲಿ ಯೋಧರಿಂದ ವಿವಿಧ ರೀತಿಯ ವೈಮಾನಿಕ ಪ್ರದರ್ಶನ ನೀಡಲಾಯಿತು.