ನ್ಯೂಯಾರ್ಕ್'ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮತ್ತೊಮ್ಮೆ ನೆರೆ ರಾಷ್ಟ್ರಕ್ಕೆ ಭಾರೀ ಮುಜುಗರವಾಗಿದೆ. ನಕಲಿ ಫೊಟೋ ತೋರಿಸಿ ತನ್ನ ಮೇಲೆ ಆರೋಪ ಹೊರಿಸಿದ್ದ ಪಾಕ್'ಗೆ ಅದೇ ಫೋಟೋ ಮೂಲಕ ಭಾರತ ದುರೇಟು ನೀಡಿದೆ.
ನ್ಯೂಯಾರ್ಕ್(ಸೆ.26): ನ್ಯೂಯಾರ್ಕ್'ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮತ್ತೊಮ್ಮೆ ನೆರೆ ರಾಷ್ಟ್ರಕ್ಕೆ ಭಾರೀ ಮುಜುಗರವಾಗಿದೆ. ನಕಲಿ ಫೊಟೋ ತೋರಿಸಿ ತನ್ನ ಮೇಲೆ ಆರೋಪ ಹೊರಿಸಿದ್ದ ಪಾಕ್'ಗೆ ಅದೇ ಫೋಟೋ ಮೂಲಕ ಭಾರತ ದುರೇಟು ನೀಡಿದೆ.
ವಿಶ್ವಸಂಸ್ಥೆಯಲ್ಲಿ ಈ ಹಿಂದೆ ನಡೆದ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಮಲೀನಾ ಲೋಧಿ 2014ರಲ್ಲಿ ಇಸ್ರೇಲ್'ನ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ತೀನ್'ನ 17 ವರ್ಷದ ಬಾಲಕಿಯ ಫೋಟೊ ತೋರಿಸಿ ಕಾಶ್ಮೀರದಲ್ಲಿ ಭಾರತ ಹಿಂಸೆ ನಡೆಸುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳು ಫೋಟೋ ಹಿಂದಿನ ಸತ್ಯವನ್ನು ವರದಿಯನ್ನು ಬಿತ್ತರಿಸಿದ್ದವು.
ನಿನ್ನೆ ನಡೆದ ಸಭೆಯಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಭಾರತದ ವಿಶ್ವಸಂಸ್ಥೆಯ ಪ್ರತಿನಿಧಿ ಪಲೋಮಿ ತ್ರಿಪಾಠಿ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಹೇಗೆ ನಕಲಿ ಸಾಕ್ಷ್ಯಾಧಾರಗಳ ಫೋಟೋ ತೋರಿಸುವ ಮೂಲಕ ಭಾರತ ಕಾಶ್ಮೀರದ ನಾಗರಿಕರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಹೇಳಿತೋ, ಹಾಗೆಯೇ ಈವರೆಗೂ ಕೇವಲ ನಕಲಿ ಸಾಕ್ಷ್ಯಾಧಾರಗಳನ್ನು ತೋರಿಸಿ ಕಾಶ್ಮೀರ ವಿಚಾರವಾಗಿ ವಿಶ್ವ ಸಮುದಾಯಕ್ಕೆ ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಪಾಕಿಸ್ತಾನ ಸುಳ್ಳು ಫೋಟೋ ತೋರಿಸುವ ಮೂಲಕ ಇಡೀ ವಿಶ್ವಸಂಸ್ಥೆ ಸದನವನ್ನು ತಪ್ಪುದಾರಿಗೆ ಎಳೆದಿದೆ ದು ಕಿಡಿ ಕಾರಿದ್ದಾರೆ.
ಅಲ್ಲದೇ ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ಗ್ರರಿಂದ ಕೊಲ್ಲಲ್ಪಟ್ಟ ಪೊಲೀಸ್ ಅಧಿಕಾರಿಯೊಬ್ಬರ ಶವ ಸಂಸ್ಕಾರದ ಫೋಟೋ ಪ್ರಸ್ತುತಪಡಿಸಿದ ತ್ರಿಪಾಠಿ "ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳು, ಸೈನಿಕರನ್ನು ಕೊಲ್ಲುತ್ತಿದ್ದಾರೆ. ಇದು ವಾಸ್ತವ. ಆದರೆ, ವಿಶ್ವ ಸಮುದಾಯದ ಮುಂದೆ, ತಾನು ಮಾಡಿದ ಕುಕೃತ್ಯವನ್ನು ಭಾರತದ ಮೇಲೆ ಹೊರಿಸಿ ಪಾಕಿಸ್ತಾನ ತನ್ನ ಆರೋಪಗಳಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ'' ಎಂದು ಆರೋಪಿಸಿದರು. ಭಾರತದ ನಡೆಯಿಂದ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರೀ ಮುಜುಗರಕ್ಕೀಡಾಗಿದೆ.
