ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಆಪ್ತ ಅಧಿಕಾರಿ ಮನೆ ಮೇಲೆ ಐಟಿ ದಾಳಿ| ಅಕ್ರಮ ಹಣ ವರ್ಗಾವಣೆಯ ಮಹತ್ವದ ದಾಖಲೆಗಳು ವಶಕ್ಕೆ| ಸಿಎಂ ವಿಶೇಷ ಕರ್ತವ್ಯ ಅಧಿಕಾರಿ ಮತ್ತು ಸಲಹೆಗಾರನ ಮನೆ ಮೇಲೆ ಐಟಿ ದಾಳಿ| ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಥ್ ಕಕ್ಕಾಬಿಕ್ಕಿ| 

ಇಂಧೋರ್/ನವದೆಹಲಿ(ಏ.07): ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಮತ್ತು ಸಲಹೆಗಾರರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆಯ ಕುರಿತಾದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 

ಸಿಎಂ ಕಮಲನಾಥ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಪ್ರವೀಣ್ ಕಕ್ಕರ್ ಅವರ ಇಂಧೋರ್ ಮನೆ ಮತ್ತು ಆಪ್ತ ಸಲಹೆಗಾರ ಆರ್.ಕೆ. ಮಿಗಲಾನಿ ಅವರ ನವದೆಹಲಿಯ ಮನೆ ಮೇಲೆ ಐಟಿ ದಾಳಿ ನಡೆದಿದೆ.

Scroll to load tweet…

ಈ ಕುರಿತಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದ್ದು, ಮಹತ್ವದ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಳನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.