ಫೇಸ್'ಬುಕ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯದರ್ಶಿ ಮಾರ್ಕ್ ಜುಕರ್ ಬರ್ಗ್ ಸೇರಿದಂತೆ ಸುಮಾರು 20 ಲಕ್ಷ ಜೀವಂತ ವ್ಯಕ್ತಿಗಳಿಗೆ ಫೇಸ್'ಬುಕ್ ಶ್ರದ್ಧಾಂಜಿಲಿ ಸಲ್ಲಿಸಿದೆ. ಆದರೆ ಈ ವಿಚಿತ್ರ ಘಟನೆಯ ಸಂಭವಿಸಿದ ಕೆಲಹೊತ್ತಿನಲ್ಲಿಯೇ ತಾಂತ್ರಿಕ ದೋಷದಿಂದಾಗಿ ಇಂತಹ ಅಚಾತುರ್ಯ ನಡೆದಿರುವುದಾಗಿ ಸ್ಪಷ್ಟಪಡಿಸಿರುವ ಸಿಬ್ಬಂದಿ, ಇದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ(ನ.13): ಫೇಸ್'ಬುಕ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯದರ್ಶಿ ಮಾರ್ಕ್ ಜುಕರ್ ಬರ್ಗ್ ಸೇರಿದಂತೆ ಸುಮಾರು 20 ಲಕ್ಷ ಜೀವಂತ ವ್ಯಕ್ತಿಗಳಿಗೆ ಫೇಸ್'ಬುಕ್ ಶ್ರದ್ಧಾಂಜಿಲಿ ಸಲ್ಲಿಸಿದೆ. ಆದರೆ ಈ ವಿಚಿತ್ರ ಘಟನೆಯ ಸಂಭವಿಸಿದ ಕೆಲಹೊತ್ತಿನಲ್ಲಿಯೇ ತಾಂತ್ರಿಕ ದೋಷದಿಂದಾಗಿ ಇಂತಹ ಅಚಾತುರ್ಯ ನಡೆದಿರುವುದಾಗಿ ಸ್ಪಷ್ಟಪಡಿಸಿರುವ ಸಿಬ್ಬಂದಿ, ಇದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ.
ಈ ತಾಂತ್ರಿಕ ದೋಷದಿಂದಾಗಿ ಏಕಕಾಲಕ್ಕೆ ಸುಮಾರು 20 ಲಕ್ಷ ಜೀವಂತ ವ್ಯಕ್ತಿಗಳ ಫೇಸ್'ಬುಕ್ ಪೇಜ್'ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿರುವ ಸಂದೇಶ ಪೋಸ್ಟ್ ಆಗಿತ್ತು. ಈ ಕುರಿತಾಗಿ ಸ್ಪಷ್ಟನೆ ನೀಡಿದ ಫೇಸ್'ಬುಕ್ ವಕ್ತಾರ 'ಕೆಲ ಕ್ಷಣಗಳವರೆಗೆ ಶ್ರದ್ಧಾಂಜಲಿ ಸಂದೇಶವಿ ಕೆಲವರ ಫೇಸ್'ಬುಕ್'ನಲ್ಲಿ ಪೋಸ್ಟ್ ಆಗಿತ್ತು. ಇದೊಂದು ಬಹುದೊಡ್ಡ ದೋಷವಾಗಿದ್ದು, ಇದನ್ನು ನಾವು ಪರಿಹರಿಸಿದ್ದೇವೆ' ಎಂದಿದ್ದಾರೆ.
ಇದೇ ವಿಚಾರವಾಗಿ ಸರ್ಜ್ ಇಂಜಿನ್ ಲ್ಯಾಂಡ್'ನ ಸಂಪಾದಕ ಸ್ಯಾನಿ ಸೂಲಿವಾನ್ 'ಫೇಸ್'ಬುಕ್'ನಲ್ಲಿ ನಾನು ಜೀವಂತವಾಗಿದ್ದೇನೆ ಎಂಬುವುದನ್ನು ತೋರಿಸಲು ಫೇಸ್'ಬುಕ್ ಲೈವ್ ಬಳಸಿಕೊಳ್ಳಬೇಕಾತಯಿತು' ಎಂದು ಟ್ವೀಟ್ ಮಾಡಿದ್ದಾರೆ.
