ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೋಕಸಭಾ ಕ್ಷೇತ್ರ ಗೋರಕ್ ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಮ್ಮಜನಕ ಕೊರತೆಯಿಂದಾಗಿ 48 ಗಂಟೆಯೊಳಗಾಗಿ 30 ಮಕ್ಕಳು ಮೃತಪಟ್ಟಿದ್ದಾರೆ. ಖಾಸಗಿ ಘಟಕವೊಂದು ಆಕ್ಸಿಜನ್ ಸಿಲಿಂಡರ್’ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದ್ದು, ಆಸ್ಪತ್ರೆಯಿಂದ ರೂ.60 ಲಕ್ಷ ಬರಬೇಕಾಗಿದ್ದ ಕಾರಣ ಆಮ್ಲಜನಕ ಸಿಲಿಂಡರ್’ಗಳ ಪೂರೈಕೆಯನ್ನು ನಿಲ್ಲಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಉತ್ತರ ಪ್ರದೇಶ (ಆ.11): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೋಕಸಭಾ ಕ್ಷೇತ್ರ ಗೋರಕ್ ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಮ್ಮಜನಕ ಕೊರತೆಯಿಂದಾಗಿ 48 ಗಂಟೆಯೊಳಗಾಗಿ 30 ಮಕ್ಕಳು ಮೃತಪಟ್ಟಿದ್ದಾರೆ. ಖಾಸಗಿ ಘಟಕವೊಂದು ಆಕ್ಸಿಜನ್ ಸಿಲಿಂಡರ್’ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದ್ದು, ಆಸ್ಪತ್ರೆಯಿಂದ ರೂ.60 ಲಕ್ಷ ಬರಬೇಕಾಗಿದ್ದ ಕಾರಣ ಆಮ್ಲಜನಕ ಸಿಲಿಂಡರ್’ಗಳ ಪೂರೈಕೆಯನ್ನು ನಿಲ್ಲಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವಜಾತ ಶಿಶು ತೀರ್ವನಿಗಾ ಘಟಕದಲ್ಲಿ 17 ಶಿಶುಗಳು ಮರಣ ಹೊಂದಿದರೆ, ಮಕ್ಕಳ ವಾರ್ಡ್’ನಲ್ಲಿ 8, ಇನ್ನೊಂದು ವಾರ್ಡ್’ನಲ್ಲಿ 5 ಮಕ್ಕಳು ಮೃತಪಟ್ಟಿರುವ ವರದಿಯಾಗಿದೆ.

ಆಕ್ಸಿಜನ್ ಕೊರತೆಯೇ ಮಕ್ಕಳ ಸಾವಿಗೆ ಕಾರಣ ಎನ್ನುವ ಆರೋಪವನ್ನು ರಾಜ್ಯ ಆರೋಗ್ಯ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ತಳ್ಳಿ ಹಾಕಿದ್ದಾರೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು ನಾಳೆ ಸಂಜೆಯೊಳಗೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ.