ಇಸ್ಲಮಾಬಾದ್[ಮೇ.18]: ಪಾಕಿಸ್ತಾನದ ಕಬಾಯಲಿ ಜಿಲ್ಲೆಯಲ್ಲಿ ಸಿಖ್ ವ್ಯಾಪಾರಿಯೊಬ್ಬರು ಅಶಾಂತಿ ಮೂಡಿರುವ ಪ್ರದೇಶದಲ್ಲಿ ಶಾಂತಿ ಹಾಗೂ ಸಾಮರಸ್ಯ ಮೂಡಿಸಲು ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂ ಗ್ರಾಹಕರಿಗೆ ವಿಶೇಷ ರಿಯಾಯ್ತಿ ನೀಡುತ್ತಿದ್ದಾರೆ.

ಖೈಬರ್ ಸಮೀಪದ ಜಮ್ರೂದ್ ನಲ್ಲಿ ತಮ್ಮ ವ್ಯಾಪಾರ ನಡೆಸುತ್ತಿರುವ ನಾರಂಜ್ ಸಿಂಗ್, ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ. ಖಾದ್ಯ ವಸ್ತುಗಳನ್ನು ಮೂಲ ಬೆಲೆಗಿಂತ 10 ರಿಂದ 30ರೂಪಾಯಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 

ಇದು 'ಪರೋಪಕಾರ' ಎನ್ನುವ ಸಿಂಗ್ ಈ ಮೂಲಕ ಮುಸ್ಲಿಂ ಹಾಗೂ ಲ್ಪಸಂಖ್ಯಾತ ಸಿಖ್ ಸಮುದಾಯದ ನಡುವೆ ಶಾಂತಿ ಹಾಗೂ ಸಾಮರಸ್ಯ ಮೂಡಿಸಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. 

ಪ್ರಮುಖ ಸಿಖ್ ಧಾರ್ಮಿಕ ಮುಖಂಡ ಹಾಗೂ ಮಾನವಾಧಿಕಾರಿ ಕಾರ್ಯಕರ್ತ ಚರಣ್ ಜೀತ್ ಸಿಂಗ್ ರನ್ನು ಕಳೆದ 2018ರ ಮೇ ತಿಂಗಳಲ್ಲಿ ಖೈಬರ್ ಪ್ರಾಂತ್ಯದಲ್ಲಿ ಗುಮಡು ಹೊಡೆದು ಹತ್ಯೆಗೈಯ್ಯಲಾಗಿತ್ತು. ಇದಾದ ಬಳಿಕ ಧರ್ಮಗಳ ನಡುವಿನ ಹಿಂಸಾಚಾರ ಭುಗಿಲೆದ್ದಿತ್ತು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.