ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ವಿಭಜಿಸಿ ಚುನಾವಣೆಗಳನ್ನು ಗೆಲ್ಲುತ್ತಿವೆ.
ಸಿಂಗಾಪುರ(ಮಾ.08): ಜನರಲ್ಲಿ ದ್ವೇಷ, ಕೋಮುಭಾವನೆಗಳನ್ನು ಭಿತ್ತಿ ಒಡೆದು ಆಳುವ ನೀತಿಯನ್ನು ಬಿಜೆಪಿ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಕ್ರೊಶ ವ್ಯಕ್ತಪಡಿಸಿದ್ದಾರೆ.
ಸಿಂಗಾಪುರ ಪ್ರವಾಸದಲ್ಲಿರುವ ಅವರು, ಅಲ್ಲಿನ ಸ್ಥಳೀಯ ಶಾಲೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಕೈಗೊಂಡು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ವಿಭಜಿಸಿ ಚುನಾವಣೆಗಳನ್ನು ಗೆಲ್ಲುತ್ತಿವೆ. ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ನೀತಿಯ ಬಗ್ಗೆ ಖಂಡಿಸಿದರು. ಅಲ್ಲಿನ ಜನರನ್ನು ಮತ್ತಷ್ಟು ಇಕ್ಕಟ್ಟಿಗೆ ಸಲುಕಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
ನನ್ನ ದೇಶದ ಬಗ್ಗೆ ಹೇಳಬೇಕೆಂದರೆ ನನಗೆ ಖಂಡಿತ ಹೆಮ್ಮೆಯಿನಿಸುತ್ತದೆ. ಇದು ವಿವಿಧತೆಯಲ್ಲಿ ಏಕತೆಯಿರುವ ನಾಡು. ಭಾರತದ ಜನರಿಗೆ ತಾವು ಬಯಸುವ ಯಾವುದನ್ನಾದರೂ ಹೇಳಬಹುದೆಂಬ ಕಲ್ಪನೆಯಿದೆ. ಏನನ್ನು ಬೇಕಾದರೂ ಮಾಡುವ ಛಲವಿದೆ. ಸವಾಲುಗಳನ್ನು ಕೂಡ ಎದುರಿಸಿ ಅವರು ನಿಲ್ಲುತ್ತಾರೆ'ಎಂದು ಹೇಳಿದರು
