ರಾಜಸ್ಥಾನದ ಜೈಪುರದಲ್ಲಿ ಬಸ್ ನದಿಗೆ ಉರುಳಿ ಬಿದ್ದು 32 ಜನರು ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ಸಂಭವಿಸಿದೆ.
ಜೈಪುರ (ಡಿ.23): ರಾಜಸ್ಥಾನದ ಜೈಪುರದಲ್ಲಿ ಬಸ್ ನದಿಗೆ ಉರುಳಿ ಬಿದ್ದು 32 ಜನರು ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ಸಂಭವಿಸಿದೆ.
ಇಲ್ಲಿನ ಮದೋಪುರ್ ಜಿಲ್ಲೆಯ ದುಬಿ ಪ್ರದೇಶದಲ್ಲಿ ಬನಾಸ್ ನದಿಗೆ ನಿರ್ಮಿಸಲಾಗಿರುವ ಸೇತುವೆಯ ಮೇಲಿನಿಂದ ಬಸ್ ನದಿಗೆ ಉರುಳಿ ಬಿದ್ದಿದೆ.
ಈಗಾಗಲೇ 26 ಮೃತದೇಹಗಳನ್ನು ನದಿಯಿಂದ ಹೊರಕ್ಕೆ ತೆಗೆಯಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸರ್ಕಲ್ ಇನ್ಸ್'ಪೆಕ್ಟರ್ ತಿಳಿಸಿದ್ದಾರೆ.
ಖಾಸಗಿ ಬಸ್ ತನ್ನ ನಿಯಂತ್ರಣ ಕಳೆದುಕೊಂಡು ಸೇತುವೆಯ ಕಂಬಿಗಳಿಗೆ ಗುದ್ದಿದ್ದು, ಬಳಿಕ ಕೆಳಕ್ಕೆ ಉರುಳಿ ಬಿದ್ದಿದೆ. ಸ್ಥಳಕ್ಕೆ ತಕ್ಷಣವೇ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಬಸ್'ನಲ್ಲಿದ್ದ ಹೆಚ್ಚಿನ ಪ್ರಯಾಣಿಕರೆಲ್ಲರೂ ಕೂಡ ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ.
