ಗಾಂಧೀನಗರ[ಸೆ.13]: ಹಿಂದೂ ಮುಸ್ಲಿಂ ಜಗಳ, ಹಿಂಸಾಚಾರ ಇಂತಹ ಸುದ್ದಿ ಸದ್ದು ಮಾಡುತ್ತಲೇ ಇರುತ್ತವೆ. ಹೀಗಿದ್ದರೂ ಆಗೊಂದು, ಈಗೊಂದು ಎಂಬಂತೆ ನಡೆಯುವ ಕೆಲ ಘಟನೆಗಳು ಸಮಾಜದಲ್ಲಿ ಮಾನವೀಯತೆ ಇದೆ, ಧರ್ಮಕ್ಕೂ ಮಿಗಿಲಾಗಿ ಇಲ್ಲಿ ಭಾವನೆಗಳಿಗೆ ಬೆಲೆ ಇದೆ ಎಂಬುವುದನ್ನುಸಾರಿ ಹೇಳುತ್ತವೆ. 

ಸಮಾಜದಲ್ಲಿ ಕೇಳಿ ಬರುವ ಕೋಮು ಗಲಭೆ ನಡುವೆ ಸದ್ಯ ಏಕಕಲದಲ್ಲಿ ನಡೆದ ಗಣೇಶ ಚತುರ್ಥಿ ಹಾಗೂ ಮೊಹರಂ ಮೆರವಣಿಗೆಯ ಫೋಟೋ ಒಂದು ಸದ್ಯ ಎಲ್ಲರ ಮನ ಕದ್ದಿದೆ. ಟ್ವೀಟ್ ಒಂದರ ಅನ್ವಯ ಧರ್ಮ ಸಾಮರಸ್ಯ ಸಾರಿದ ಫೋಟೋ ಗುಜರಾತ್ ನಲ್ಲಿ ನಡೆದ ಘಟನೆಯದ್ದೆಂದು ತಿಳಿದು ಬಂದಿದೆ.

ವಿವಿಧತೆಯಲ್ಲಿ ಏಕತೆ ಇದು ಭಾರತದ ವೈಶಿಷ್ಟ್ಯ, ಇದರಂತೆ ಫೋಟೋದಲ್ಲಿ ಏಕಕಾಲದಲ್ಲಿ ಮೊಹರಂ ಹಾಗೂ ಗಣೇಶ ಚತುರ್ಥಿ ಮೆರವಣಿಗೆ ನಡೆಯುತ್ತಿದ್ದರೂ ಎರಡೂ ಧರ್ಮದ ಜನರು ಶಾಂತತೆಯಿಂದ ವರ್ತಿಸಿದ್ದಾರೆ. ಅಲ್ಲದೇ ಪರಸ್ಪರ ಹಸ್ತಲಾಘವ ಮಾಡಿ ಶುಭ ಕೋರಿದ್ದಾರೆ. 

ಹುಬ್ಬಳ್ಳಿಯಲ್ಲೂ ಸದ್ದು ಮಾಡಿದ ಧರ್ಮ ಸಾಮರಸ್ಯ

ಗಣೇಶನೂ ಅಲ್ಲೇ, ಮೊಹರಂ ದೇವರೂ ಅಲ್ಲೇ: ಸುದ್ದಿಯಲ್ಲಿ ಬಾಗಲಕೋಟೆ ಜಿಲ್ಲೆ!

ಕರ್ನಾಟಕದ ಹುಬ್ಬಳ್ಳಿಯಲ್ಲೂ ಇಂತಹುದೇ ಘಟನೆ ನಡೆದಿದ್ದು, ಇಲ್ಲಿ ಒಂದೇ ಪೆಂಡಾಲ್ ನಡಿಯಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬವನ್ನಾಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸ್ಥಳೀಯರೊಬ್ಬರು 'ನಾವು ಈ ಮೂಲಕ ಧರ್ಮ ಸಾಮರಸ್ಯದ ಸಂದೇಶ ನೀಡಲಿಚ್ಛಿಸುತ್ತೇವೆ. ಪ್ರಸ್ತುತ ಇಂತಹ ಸಂದೇಶ ಸಾರುವುದು ಅತಿ ಅಗತ್ಯ' ಎಂದಿದ್ದರು.