ಗಣೇಶನೂ ಅಲ್ಲೇ, ಮೊಹರಂ ದೇವರೂ ಅಲ್ಲೇ: ಸುದ್ದಿಯಲ್ಲಿ ಬಾಗಲಕೋಟೆ ಜಿಲ್ಲೆ!
ಒಂದೇ ಸ್ಥಳದಲ್ಲಿ ಗಣೇಶ ಮೂರ್ತಿ, ಮೊಹರಂ ದೇವರು! ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪೂರ! ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಭಾಂಧವರು! ವಿಜೃಂಭಣೆಯಿಂದ ಗಣೇಶ, ಮೊಹರಂ ಹಬ್ಬ ಆಚರಣೆ! ಕೇಸರಿ, ಹಸಿರು ಹಣೆಪಟ್ಟಿ ಕಟ್ಟಿಕೊಂಡು ಕುಣಿದ ಯುವಕರು
ಬಾಗಲಕೋಟೆ(ಸೆ.17): ಈ ಬಾರಿಯ ಗಣೇಶ ಹಬ್ಬ ಮತ್ತು ಮೊಹರಂ ಹಬ್ಬ ಭಾವೈಕ್ಯತೆಯ ಸಂದೇಶ ಸಾರುವಲ್ಲಿ ಯಶಸ್ವಿಯಾಗಿದೆ. ಕಾರಣ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಹಿಂದೂ-ಮುಸ್ಲಿಂ ಭಾಂಧವರು ಒಟ್ಟಾಗಿ ಗಣೇಶ ಹಬ್ಬ ಮತ್ತು ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದಾರೆ.
ಇಲ್ಲಿನ ಮುಧೋಳ ತಾಲೂಕಿನ ಮಹಾಲಿಂಗಪೂರದ ಬುದ್ನಿ ಪಿಡಿ ಕಾಲೋನಿಯಲ್ಲಿ ಏಕಕಾಲಕ್ಕೆ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬ ಆಚರಣೆ ಮಾಡಲಾಗಿದೆ. ಒಂದೇ ಕಡೆ ಗಣೇಶ ಮೂರ್ತಿ ಮತ್ತು ಮೊಹರಂ ದೇವರನ್ನು ಕೂರಿಸಿ ಹಿಂದೂ-ಮುಸ್ಲಿಂ ಭಕ್ತರು ಪೂಜೆ ನೆರವೇರಿಸಿದ್ದಾರೆ.
"
ಅಲ್ಲದೇ ರಾತ್ರಿ ವೇಳೆ ನಡೆಯುವ ಮೆರವಣಿಗೆಯಲ್ಲೂ ಯುವಕರು ಹಣೆಗೆ ಕೇಸರಿ ಮತ್ತು ಹಸಿರು ಪಟ್ಟಿ ಕಟ್ಟಿಕೊಂಡು ಕುಣಿದು ಕುಪ್ಪಳಿಸಿದರು. ಊರಿನ ಜನ ಕೂಡ ಒಂದೇ ಸ್ಥಳದಲ್ಲಿರುವ ಮೊಹರಂ ದೇವರು ಮತ್ತು ಗಣೇಶ ಮೂರ್ತಿಯ ದರ್ಶನಕ್ಕಾಗಿ ಬರುತ್ತಿದ್ದಾರೆ.