Asianet Suvarna News Asianet Suvarna News

ಲಾಲುಗೆ ಮತ್ತೆ ಸಂಕಷ್ಟ; ಎದುರಾಗಿದೆ ಹೊಸ ಭ್ರಷ್ಟಾಚಾರದ ಆರೋಪ

ಲಾಲು ಪ್ರಸಾದ್ ಯಾದವ್’ಗೆ ಮತ್ತೊಮ್ಮೆ ಸಂಕಷ್ಟ ದುರಾಗಿದೆ. ರೈಲ್ವೇ ಹೋಟೆಲ್ ಹಂಚಿಕೆ ಪ್ರಕರಣದಲ್ಲಿ ಲಾಲು ಪ್ರಸಾದ್ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು ಜಾರಿ ನಿರ್ದೇಶನಾಲಯವೂ ಕೂಡಾ ತನಿಖೆಗೆ ಮುಂದಾಗಿದೆ.

In Hour Of Political Crisis Lalu Yadav  Family Face New Case For Corruption

ನವದೆಹಲಿ (ಜು.27): ಲಾಲು ಪ್ರಸಾದ್ ಯಾದವ್’ಗೆ ಮತ್ತೊಮ್ಮೆ ಸಂಕಷ್ಟ ದುರಾಗಿದೆ. ರೈಲ್ವೇ ಹೋಟೆಲ್ ಹಂಚಿಕೆ ಪ್ರಕರಣದಲ್ಲಿ ಲಾಲು ಪ್ರಸಾದ್ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು ಜಾರಿ ನಿರ್ದೇಶನಾಲಯವೂ ಕೂಡಾ ತನಿಖೆಗೆ ಮುಂದಾಗಿದೆ.

ಲಾಲು ಪ್ರಸಾದ್ ವಿರುದ್ಧ ಹಣದ ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆಗೆ ಮುಂದಾಗಿದೆ.

ಕಳೆದ ತಿಂಗಳು ಸಿಬಿಐ ಪಾಟ್ನಾದಲ್ಲಿರುವ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಅಕ್ರಮ ಪ್ರಕರಣದಲ್ಲಿ ತೇಜಸ್ವಿ ಯಾದವ್ ಹೆಸರು ಕೇಳಿ ಬಂದಿತ್ತು. ಆಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದ್ದರು. ತೇಜಸ್ವಿ ರಾಜಿನಾಮೆ ನೀಡದಿದ್ದರಿಂದ ಕೊನೆಗೆ ನಿತೀಶ್ ಕುಮಾರ್ ನಿನ್ನೆ ಸಿಎಂ ಹುದ್ದೆಗೆ ರಾಜಿನಾಮೆ ನೀಡಿ ಇಂದು ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿದ್ದಾರೆ.

ಒಂದು ಕಡೆ ನಿತೀಶ್ ಕುಮಾರ್ ನಡೆ ಬಿಸಿ ತುಪ್ಪವಾಗಿದ್ದರೆ ಇನ್ನೊಂದು ಕಡೆ ಮತ್ತೊಮ್ಮೆ ಭ್ರಷ್ಟಾಚಾರದ ಆರೋಪ ಎದುರಾಗಿದೆ. ಹಣದ ಅವ್ಯವಹಾರ ಪ್ರಕರಣ ಲಾಲು ಕುಟುಂಬಕ್ಕೆ ಕಂಟಕವಾಗಿ ಪರಿಣಮಿಸಲಿದೆ. ಜಾರಿ ನಿರ್ದೇಶನಾಲಯ ಅವರ ವಿವಾದಾತ್ಮಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಂದಿದ್ದು, ಶೀಘ್ರದಲ್ಲಿಯೇ ತನ್ನ ಅಧಿಕಾರ ಬಳಸುವ ನಿರೀಕ್ಷೆಯಿದೆ.  

Follow Us:
Download App:
  • android
  • ios