Asianet Suvarna News Asianet Suvarna News

ಮೋಜಿಗೆ ಹೋಗುವ ರಾಜ್ಯದಲ್ಲಿ ಎಲ್ಲೆಂದರಲ್ಲಿ ಮದ್ಯಪಾನ ಮಾಡಿದರೆ ಜೈಲು !

ಸಾರ್ವಜನಿಕರು, ಪ್ರವಾಸೋದ್ಯಮ ವಲಯದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ

In Goa drinking in the open can land you in jail
  • Facebook
  • Twitter
  • Whatsapp

ಪಣಜಿ(ಮೇ.04): ಗೋವಾದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿದರೆ, ಜೈಲಿಗೆ ಹೋಗಬೇಕಾದೀತು. ಪ್ರವಾಸಿ ರಾಜ್ಯವಾದ ಗೋವಾದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುವವರು ಕಂಡು ಬಂದರೆ, ಅವರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಐಪಿಸಿ ಕಲಂ 34ರನ್ವಯ ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ಕಶ್ಯಪ್ ಹೇಳಿದ್ದಾರೆ. ಸಾರ್ವಜನಿಕರು, ಪ್ರವಾಸೋದ್ಯಮ ವಲಯದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ರಾತ್ರಿ ವೇಳೆ ಪ್ರವಾಸಿಗರು ಬೀಚ್‌ಗಳಲ್ಲಿ ಮದ್ಯಪಾನ ಮಾಡುವುದರಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿದ್ದವರು ಗಮನ ಸೆಳೆದಿದ್ದರು.

Follow Us:
Download App:
  • android
  • ios