ಶ್ರೀನಗರ[ಆ.19]: ಜಮ್ಮು ಕಾಶ್ಮೀರದ ತವೀ ನದಿಯಲ್ಲಿ ಅಚಾನಕ್ಕಾಗಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಗೆ ಅಡ್ಡಲಾಗಿ ಕಟ್ಟಿದ್ದ ಇಬ್ಬರು ಬೆಸ್ತರು ಪ್ರವಾಹದಲ್ಲಿ ಸಿಲುಕಿದ್ದಾರೆ. ಹೀಗೆ ಅಪಾಯದಲ್ಲಿ ಸಿಲುಕಿದ್ದ ಈ ಇಬ್ಬರು ಮೀನುಗಾರರನ್ನು ಸತತ 30 ನಿಮಿಷಗಳ ಕಾರ್ಯಾಚರಣೆ ನಡೆಸಿ ಭಾರತೀಯ ವಾಯುಸೇನೆ ರಕ್ಷಿಸಿದೆ. 

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಇಬ್ಬರು ಮೀನುಗಾರರು ನಿರ್ಮಾಣ ಹಂತದಲ್ಲಿದ್ದ ಸೇತುವೆ ಮೇಲೆ ಹತ್ತಿ ಕುಳಿತಿದ್ದಾರೆ. ಈ ವೇಳೆ ವಾಯುಪಡೆ ಇವರ ರಕ್ಷಣೆಗೆ ಮುಂದಾಗಿದೆ. ಹೆಲಿಕಾಪ್ಟರ್ ಮೂಲಕ ಓರ್ವ ಯೋಧ ಸೇತುವೆ ಮೇಲಿಳಿದು ಇಬ್ಬರಿಗೂ ಜೀವ ರಕ್ಷಕ ಜಾಕೆಟ್ ತೊಡಿಸಿ ಮೇಲಕ್ಕೆತ್ತಿದ್ದಾರೆ. 

"

ಇಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಬಳಿಕ ಮತ್ತೆ ಮರಳಿದ ವಾಯುಸೇನಾ ಹೆಲಿಕಾಪ್ಟರ್ ಸೇತುವೆ ಮೇಲಿದ್ದ ಯೋಧನನ್ನು ಕರೆದೊಯ್ದಿದೆ. ಜೀವ ಪಣಕ್ಕಿಟ್ಟು ದೇಶದ, ಇಲ್ಲಿನ ನಾಗರಿಕರ ಸೇವೆಗೆ, ರಕ್ಷಣೆಗೆ ಮುಂದಾಗುವ ನಮ್ಮ ಯೋಧರಿಗೆ ಬಿಗ್ ಸೆಲ್ಯೂಟ್.