ಇಸ್ಲಾಮಾಬಾದ್ (ಆ. 20): ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ತಮ್ಮ  ಸಚಿವ ಸಂಪುಟದಲ್ಲಿ ಸ್ನೇಹಿತ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಸ್ನಾನ ನೀಡಿದ್ದಾರೆ.

ಆದರೆ, ಸಿಧುಗೆ ಸಚಿವ ಸ್ಥಾನ ನೀಡಲು ಅವರು ಭಾರತದ ನಾಗರಿಕರಾಗಿರುವುದು ಅಡ್ಡಿಯಾಗಿದೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸಿ ಸಿಧುಗೆ ತಕ್ಷಣದಿಂದಲೇ ಪಾಕಿಸ್ತಾನ ಪೌರತ್ವ ನೀಡಲಾಗಿದೆ. ಅಲ್ಲದೇ ‘ಕ್ರಿಕೆಟ್ ಸಚಿವ’ ಹುದ್ದೆಯನ್ನು ಸೃಷ್ಟಿಸಿ ಸಿಧುಗೆ ವಹಿಸಲಾಗಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದಿಂದ ತೆರಳಿದ್ದ ಸಂದರ್ಭದಲ್ಲಿ ಸಿಧು ಈ ಡೀಲ್ ಕುದುರಿಸಿದ್ದಾರೆ. ಕ್ರಿಕೆಟ್ ಇದ್ದಾಗಲೆಲ್ಲಾ ಪಾಕಿಸ್ತಾನಕ್ಕೆ ಬಂದು ಸಚಿವ ಹುದ್ದೆ ನಿಭಾಯಿಸುವುದಾಗಿ ಸಿಧು ಹೇಳಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.