ಭಾರತದಲ್ಲಿ ಇಮ್ರಾನ್ ಖಾನ್ ಗೆ ಎಷ್ಟು ಮಕ್ಕಳು..! ಅವರ್ಯಾರು..?

First Published 2, Aug 2018, 9:17 AM IST
Imran Khan has 5 illegitimate children In India
Highlights

ಇಮ್ರಾನ್ ಖಾನ್ ಗೆ ಭಾರತದಲ್ಲಿ ಎಷ್ಟು ಜನ ಮಕ್ಕಳಿದ್ದಾರೆ ಗೊತ್ತೆ..? ಅವರ್ಯಾರು  ಎನ್ನುವುದನ್ನು ಕೇಳಿದರೆ ಆಶ್ಚರ್ಯವಾಗುವುದು ಖಚಿತ.

ಇಸ್ಲಮಾಬಾದ್ :  ಒಮ್ಮೆ ಇಮ್ರಾನ್ ನಗುತ್ತ ಹೇಳಿದ್ದರು, ‘ನನಗೆ ಗೊತ್ತಿರುವಂತೆ ಒಟ್ಟು  ಭಾರತದಲ್ಲಿ 5 ಇರಬಹುದು.’  ‘ಐದು? ಏನು ಐದು’ ಎಂದು ಕೇಳಿದ್ದೆ. ‘ಮಕ್ಕಳು’ ಎಂದು ನಕ್ಕರು. ‘ಏನು? 
ನಿಮಗೆ ಅಕ್ರಮ ಸಂಬಂಧದಿಂದ ಹುಟ್ಟಿದ ಐದು ಮಕ್ಕಳಿದ್ದಾರೆಯೇ? ನಿಮಗೆ ಹೇಗೆ ಗೊತ್ತು?’  ‘ಅವರ ತಾಯಂದಿರು ಹೇಳಿದರು.’
‘ಎಲ್ಲರೂ ಬಿಳಿಯರೇ?’  
‘ಇಲ್ಲ. ಕೆಲವರು ಇಂಡಿಯನ್ನರು. ಹಿರಿಯವಳಿಗೆ ಈಗ 34 ವರ್ಷ.’
‘ಯಾಕೆ ಆಕೆಯ ತಾಯಿ ಅದನ್ನು ಬಹಿರಂಗಪಡಿಸಿಲ್ಲ?’
‘ಯಾಕೆ ಅಂದ್ರೆ ಅವಳು ಖುಷಿಯಲ್ಲಿ ತೇಲುತ್ತಿದ್ದಾಳೆ. ಅವಳಿಗೆ ಶತಮಾನದ ಹಿಂದೆಯೇ ಮದುವೆಯಾಗಿದೆ! ಆದರೆ, ಮಕ್ಕಳಿರಲಿಲ್ಲ.
ನನ್ನಿಂದ ಆಯಿತು ಎಂದು ಸ್ವರ್ಗಸದೃಶ ಸಂತೋಷದಲ್ಲಿದ್ದಾಳೆ. ಇದನ್ನು ಯಾರಿಗೂ ಹೇಳಬೇಡಿ ಎಂದು ಬೇಡಿಕೊಂಡಿದ್ದಾಳೆ.
ನಾನೂ ಒಪ್ಪಿದ್ದೇನೆ.’

loader