ಖಾಸಾ ಶಿಷ್ಯರೆಂದೇ ಪರಿಗಣಿಸಲಾಗಿದ್ದ ಡಿಕೆ ಶಿವಕುಮಾರ್ ಅವರೇ ಕೈಕೊಟ್ಟಿದ್ದು ಎಸ್ಸೆಮ್ ಕೃಷ್ಣ ಅವರಿಗೆ ಬೇಸರ ತಂದಿತ್ತು.

ಬೆಂಗಳೂರು(ಜ. 28): ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಎಸ್ಸೆಮ್ ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ರಾಜಕಾರಣವನ್ನು ಗಮನಿಸುತ್ತಾ ಬಂದವರಿಗೆ ಕೃಷ್ಣ ನಿರ್ಧಾರ ಅಷ್ಟೇನೂ ಅನಿರೀಕ್ಷಿತವೆನಿಸಿಲ್ಲ. ಕೃಷ್ಣ ರಾಜೀನಾಮೆಗೆ ಕಾರಣವಾದ ಸಂಗತಿಗಳ ಒಂದು ಪಟ್ಟಿ ಇಲ್ಲಿದೆ.

1) ಅಕ್ಟೋಬರ್ 22, 2012ರಲ್ಲಿ ಎಸ್ಸೆಮ್ ಕೃಷ್ಣ ಅವರನ್ನು ದಿಢೀರನೇ ವಿದೇಶಾಂಗ ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಲಾಗಿತ್ತು. ಇದು ಹಿರಿಯ ರಾಜಕಾರಣಿಗೆ ಶಾಕ್ ತಂದಿತ್ತು.

2) 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಸ್ಸೆಮ್ ಕೃಷ್ಣರನ್ನು ನಾಮಕಾವಸ್ತೆಯ ಮಟ್ಟಕ್ಕೆ ತಂದುಬಿಡಲಾಗಿತ್ತು. ಅವರ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಲಾಗಿತ್ತು.

3) ಸಂಪುಟ ರಚನೆಯಲ್ಲೂ ಎಸ್ಸೆಮ್ ಕೃಷ್ಣ ಬೆಂಬಲಿಗರನ್ನು ಕಡೆಗಣಿಸಲಾಗಿತ್ತು

4) ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಎಸ್ಸೆಮ್ ಕೃಷ್ಣರನ್ನು ಮೂಲೆಗುಂಪು ಮಾಡಲಾಗಿತ್ತು.

5) ಶ್ರೀನಿವಾಸ ಪ್ರಸಾದ್ ರಾಜೀನಾಮೆಯು ಎಸ್ಸೆಮ್ ಕೃಷ್ಣಗೆ ಅಸಮಾಧಾನ ತಂದಿತ್ತು

6) ಕರ್ನಾಟಕದಿಂದ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ಎಸ್ಸೆಮ್ ಕೃಷ್ಣಗೆ ಯಾರೂ ಬೆಂಬಲ ನೀಡಲಿಲ್ಲ.

7) ಖಾಸಾ ಶಿಷ್ಯರೆಂದೇ ಪರಿಗಣಿಸಲಾಗಿದ್ದ ಡಿಕೆ ಶಿವಕುಮಾರ್ ಅವರೇ ಕೈಕೊಟ್ಟಿದ್ದು ಎಸ್ಸೆಮ್ ಕೃಷ್ಣ ಅವರಿಗೆ ಬೇಸರ ತಂದಿತ್ತು.

8) ಇತ್ತೀಚೆಗೆ ಎಸ್ಸೆಮ್ ಕೃಷ್ಣ ಅವರು ಪ್ರಧಾನಿ ಮೋದಿ ಪರವಾಗಿ ಹೇಳಿಕೆ ನೀಡಿದ್ದು ಕಾಂಗ್ರೆಸ್ ಕೈಕಮಾಂಡ್'ಗೆ ಕೆಂಗಣ್ಣು ತಂದಿತ್ತು.