ಚೆನ್ನೈ : ಕೇರಳದ ಮಳೆ ಪ್ರವಾಹದ ನೆನಪುಗಳು ಮಾಸಿಲ್ಲ. ಗಜರಾಜನ ಆರ್ಭಟಗಳ ಗಾಯ ಇನ್ನೂ ಹಸಿಹಸಿ ಇರುವಾಗಲೇ ಹೊಸ ಮಳೆಯ ಹಾವಳಿ ಸುದ್ದಿ ಬಂದಿದೆ. ಹವಾಮಾನ ಇಲಾಖೆ ಘೋಷಿಸಿದ ರೆಡ್ ಅಲರ್ಟ್ ಪ್ರಕಾರ ಉತ್ತರ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕುಂಭದ್ರೊಣ ಮಳೆ ಸುರಿಯಲಿದೆ.

 ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. 

ಮುಂದಿನ 24 ಗಂಟೆಯಲ್ಲಿ ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ಕುಡ್ಡಲೂರು, ನಾಗಪಟ್ಟಣಂ, ಕಾರೈಕಲ್, ತಿರುವರೂರ್, ಪದುಕೊಟ್ಟೈ, ಶಿವಗಂಗೈ ಮತ್ತು ರಾಮನಾಥಪುರಂ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಸೂಚನೆ ನೀಡಲಾಗಿದೆ.

ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಂಗಳವಾರದಿಂದ ಮಳೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲು ತಿಳಿಸಲಾಗಿದೆ.

ಈಗಾಗಲೇ ತಮಿಳುನಾಡಿನಲ್ಲಿ ಗಜ ಚಂಡಮಾರುತ ಅಪ್ಪಳಿಸಿ ಭಾರೀ ಪ್ರಮಾಣದಲ್ಲಿ ಅನಾಹುತ ಸೃಷ್ಟಿ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗಿದೆ. ಸದ್ಯ ತಣ್ಣಗಾಗಿರುವ ಗಜ ಅಬ್ಬರದ ಬಳಿಕ ಇದೀಗ ಮತ್ತೆ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.