ಅಂಡಮಾನ್ ಸಮುದ್ರಕ್ಕೆ ಅಪ್ಪಳಿಸಿರುವ ‘ಪಬುಕ್’ ಚಂಡಮಾರುತವು ಪ್ರತೀ ಗಂಟೆಗೆ 21 ಕಿ.ಮೀ ವೇಗವಾಗಿ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಹೀಗಾಗಿ, ಈ ಭಾಗದಲ್ಲಿ ಮೀನುಗಾರರು ಸಮುದ್ರದ ದಡಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಕೆ ನೀಡಿದೆ.
ನವದೆಹಲಿ : ಈಗಾಗಲೇ ಅಂಡಮಾನ್ ಸಮುದ್ರಕ್ಕೆ ಅಪ್ಪಳಿಸಿರುವ ‘ಪಬುಕ್’ ಚಂಡಮಾರುತವು ಪ್ರತೀ ಗಂಟೆಗೆ 21 ಕಿ.ಮೀ ವೇಗವಾಗಿ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಹೀಗಾಗಿ, ಈ ಭಾಗದಲ್ಲಿ ಮೀನುಗಾರರು ಸಮುದ್ರದ ದಡಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಕೆ ನೀಡಿದೆ.
ಈ ಬಗ್ಗೆ ಶನಿವಾರ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ‘ಮುಂದಿನ ಕೆಲವು ಗಂಟೆಗಳ ಕಾಲ ಪಶ್ಚಿಮ ವಾಯುವ್ಯ ದಿಕ್ಕಿನಲ್ಲೇ ಪಬುಕ್ ಚಂಡ ಮಾರುತ ಚಲಿಸಲಿದೆ.
ಆ ನಂತರ ಭಾನುವಾರ ಈ ಚಂಡಮಾರುತವು ಪ್ರತೀ ಗಂಟೆಗೆ 80ರಿಂದ 90 ಕಿ.ಮೀ ವೇಗವಾಗಿ ಚಲಿಸಲಿದೆ. ಈ ವೇಳೆ ಅಂಡಮಾನ್ ದ್ವೀಪ ಪ್ರದೇಶ ಸೇರಿದಂತೆ ಇತರ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೋಮವಾರ ಮತ್ತು ಮಂಗಳವಾರ ಉತ್ತರ ವಾಯುವ್ಯ ದಿಕ್ಕಿನತ್ತ ಅಂದರೆ, ಮ್ಯಾನ್ಮಾರ್ ಕರಾವಳಿಯತ್ತ ಚಲಿಸಲಿದೆ,’ ಎಂದು ಹೇಳಿದೆ.
