Asianet Suvarna News Asianet Suvarna News

ಜಾಮೀನು ಅರ್ಜಿ ವಜಾ, ಆವರಣದಲ್ಲೇ ಕಣ್ಣೀರು ಹಾಕಿದ ಡಿಸಿ ವಿಜಯ್ ಶಂಕರ್

ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಡಿಸಿ ವಿಜಯ್ ಶಂಕರ್ , ಎಸಿ ನಾಗರಾಜ್, ಗ್ರಾಮಲೆಕ್ಕಿಗ ಮಂಜುನಾಥ್ ಅವರಿಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

IMA scam Bengaluru DC Vijayshankar Bail Plea dismissed
Author
Bengaluru, First Published Jul 12, 2019, 10:44 PM IST
  • Facebook
  • Twitter
  • Whatsapp

ಬೆಂಗಳೂರು[ಜು. 12] ಎಸ್ ಐಟಿ ತನಿಖಾ ತಂಡ ಬೆಂಗಳೂರು ನಗರ ಡಿಸಿ ವಿಜಯ್ ಶಂಕರ್ , ಎಸಿ ನಾಗರಾಜ್, ಗ್ರಾಮಲೆಕ್ಕಿಗ ಮಂಜುನಾಥ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಮಧ್ಯಂತರ ಜಾಮೀನಿಗೆ ಮನವಿ ಮಾಡಿದ್ದ ಡಿಸಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು 1 ನೇ ಸೆಷನ್ಸ್ ಕೋರ್ಟ್ ವಜಾ ಮಾಡಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಐಎಂಎ ಉಡುಗೊರೆ ಪಡೆದ ಮೌಲ್ವಿ ಅರೆಸ್ಟ್

ಮಧ್ಯಂತರ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಕೋರ್ಟ್ ಆವರಣದಲ್ಲೇ ಡಿಸಿ ವಿಜಯ್ ಶಂಕರ್ ಕಣ್ಣೀರು ಹಾಕಿದ್ದಾರೆ. ಜ್ಯವೆಲರಿ ಶಾಪ್ ನ  ವಂಚಕ ಐಎಂಎ ಮನ್ಸೂರ್ ಹಣ ಹೂಡಿಕೆ ಮಾಡಿದ್ದ ಸಾವಿರಾರು ಜನರಿಗೆ ವಂಚಿಸಿ ಆಡಿಯೋ ಒಂದನ್ನು ಬಿಡುಗಡೆ ಮಾಡಿ ಪಲಾಯನ ಮಾಡಿದ್ದರು.

Follow Us:
Download App:
  • android
  • ios